ಕ್ರಿಯಾತ್ಮಕ ಜಾನಪದದಲ್ಲಿ ಜನಪದ ಆಟಗಳದು ವಿಶೇಷ ಕ್ಷೇತ್ರ. ಜಗತ್ತಿನ ಎಲ್ಲಜನಾಂಗಗಳಲ್ಲೂ ಪ್ರಾಚೀನ ಕಾಲದಿಂದ ಜನಪದ ಆಟಗಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿವೆ. ಕರ್ನಾಟಕದಲ್ಲೂ ನೂರಾರು ಜನಪದ ಆಟಗಳು ಚಾಲ್ತಿಯಲ್ಲಿವೆ. ಒಳಾಂಗಣ, ಹೊರಾಂಗಣ, ಆಚರಣಾತ್ಮಕ ಆಟಗಳಾಗಿ ಮನುಕುಲದ ವಿಕಾಸದಲ್ಲಿ ಭಾಗಿಗಳಾಗಿವೆ. ವಿಶ್ವ ವ್ಯಾಪಕತೆಯನ್ನು ಪಡೆದುಕೊಂಡಿವೆ. ಸಾಮಾಜಿಕ, ರಾಜಕೀಯ, ಮನೋರಂಜಕ, ಸಾಂಸ್ಕೃತಿಕ ಹೊಳಹುಗಳನ್ನು ಮೈದುಂಬಿಕೊಂಡಿವೆ. ಪ್ರಸ್ತುತ ಕೃತಿಯು ಜಾನಪದ ಆಟಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸುತ್ತದೆ.
©2025 Book Brahma Private Limited.