ಲೇಖಕ ಹಿ.ಶಿ.ರಾಮಚಂದ್ರೇಗೌಡ ಕನ್ನಡದ ಪ್ರಮುಖ ಜಾನಪದ ಪ್ರಕಾರಗಳಾದ ಕಥೆ, ಕಥನಗೀತೆ, ಬಯಲಾಟ, ಪುರಾಣ, ಕಾವ್ಯ , ಹೆಣ್ಣು, ಆಹಾರ, ರಾಜಕೀಯ, ಕನ್ನಡದ ಬಳ್ಳಿ ಬಡಗ ಜನರನ್ನು ಮುಂದಿಟ್ಟಕೊಂಡು ಸಂಸ್ಕ್ರತಿಯ ಮೂಲ ನೆಲೆಯನ್ನು , ಅದರ ವಾಸ್ತವವನ್ನು ಸಂಶೋಧಿಸಿದ, ಮೂಲ ವಾಸ್ತವದ ಬಗ್ಗೆ ಅನ್ವೇಷಣೆ ನಡೆಸಿದ ಪರಿಣಾಮ ಈ ಕೃತಿಯನ್ನು ರಚಿಸಿದ್ದಾರೆ. ಒಟ್ಟು ಈ ಕೃತಿಯು ಕನ್ನಡ ಸಂಸ್ಕ್ರತಿಯ ಒಟ್ಟು ಚಿಂತನೆ, ಹಾಗು ಕನ್ನಡ ಸಂಸ್ಕ್ರತಿಯ ಮರುಸೃಷ್ಟಿ ಬಗ್ಗೆ , ಕನ್ನಡ ಸಂಸ್ಕ್ರತಿಯ ಕೆಲವು , ಕನ್ನಡ ಜಾನಪದದ ಕೆಲವು ಅಂಗಗಳನ್ನು ಪರಿಗಣಿಸಿಕೊಂಡು ಅದನ್ನು ವಿವೇಚನೆಗೆ ಒಳಪಡಿಸುವ ಕೆಲಸವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸಮಕಾಲಿನವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅದನ್ನು ಆಧುನಿಕವಾಗಿ ಹೇಗೆ ಅನ್ವಯಿಕವಾಗಿದೆ ಎಂಬೆಲ್ಲಾ ವಿಷಯದ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.