ಕೋಟಿಗಾನಹಳ್ಳಿ ರಾಮಯ್ಯ ಅವರು ಸಂಪಾದಿಸಿದ ಮಕ್ಕಳ ಸಾಹಿತ್ಯ ಕೃತಿ ʻರತ್ನ ಪಕ್ಸಿʼ. ಬೇರೆ-ಬೇರೆ ಲೇಖಕರು ಬರೆದ ಹಳೆ ಮೈಸೂರು ಪ್ರಾಂತ್ಯದ ಜನಪದ ಕಥೆಗಳನ್ನು ಒಟ್ಟುಸೇರಿಸಿ ಮಕ್ಕಳ ಓದಿಗಾಗಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಬೆಕ್ಕು ಹುಲಿಗೆ ಪಾಠ ಕಳಿಸಿದ್ದು, ಗೀಜಗನ ನ್ಯಾಯ, ಆನೆ ಬಾಲ ಹಿಡ್ದು ದೇವಲೋಕಕ್ಕೆ, ಚಟಪಟ ! ಗರಗರ ! ಕೊತಕೊತ, ರತ್ನ ಪಕ್ಸ, ನೂರೋಂದ್ನೇ ಗಿಣಿ, ಒನಕೆ ದಾಸಪ್ಪ, ತೆಂಗಿನ್ಕಾಯಿ ಚೌಕಾಸಿ, ಕುದ್ರೆ ನೊಣ ರಗುತ್ ಪರೀಕ್ಸೆ, ಎಮ್ಮೆ- ಕಂಬ್ಳಿ ಪಾಲು, ಉಗುರು ಕಣ್ಣಲ್ಲಿ ಅನ್ನ, ಹಾಲು- ನೀರು, ಗೂಬೆಗೆ ಪಟ್ಟ ತಪ್ಪಿದ್ದು, ಪುಟಕ್! ಜರ ಜರ! ಡುಬುಕ್! ಮ್ಯಾ, ದುಡ್ಡು ದುಡ್ಡು, ಗಂಗನಾಗ ಗಂಗ ಸೇರ‍್ತು, ತರ‍್ಲೊ ಮರ‍್ಲೋ ಹೊಯ್, ಚಾಡಿ ಮುಪ್ಪೇ?, ಬೇವು- ಹುಣಸೆ, ಪಿಟ್ಟೆಕಾಟ, ಪಾರ್ವತಿ- ಪರಮೇಶ್ವರರ ಸೋಲು ಹೀಗೆ ಒಟ್ಟು 21 ಶೀರ್ಷಿಕೆಗಳ ಕತೆಗಳಿವೆ.
©2024 Book Brahma Private Limited.