ಡಾ. ಶಿವರಾಮ ಕಾರಂತ ಅವರು ರಚಿಸಿದ ಜಾನಪದೀಯ ಕೃತಿ-‘ಯಕ್ಷಗಾನ’. ಜಾನಪದ ಕಲೆಯ ಕುರಿತು ಕಾರಂತರು ಬರೆದ ಹತ್ತು ಹಲವು ಕೃತಿಗಳ ಪೈಕಿ ಇದೂ ಒಂದು. ಜಾನಪದೀಯ ಕಲಾ ಪಾತ್ರಗಳನ್ನು ಸೃಷ್ಟಿಸಿದ ಕಾರಂತರು ಅವರಿಗೆ ನಿರ್ದಿಷ್ಟ ವೇಷಭೂಷಣಗಳನ್ನೂ ಕಲ್ಪಿಸಿದ್ದಾರೆ. ಈ ವೇಷಭೂಷಣಗಳ ಬಣ್ಣದ ಚಿತ್ರಗಳು ಈ ಕೃತಿಯ ಹೆಗ್ಗಳಿಕೆಯೂ ಆಗಿದೆ. ಮೈಸೂರು ವಿಶ್ವವಿದ್ಯಾಲಯವು ಕನ್ನಡೇತರರ ಕಲಿಕೆಗಾಗಿ ಸ್ವತಃ ಕಾರಂತರಿಂದಲೇ ಈ ಕೃತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದೆ. ಕಲಾವಿದ ಬಿ.ವಿ. ಕಾರಂತರು ಈ ಕೃತಿಯನ್ನು ಹಿಂದಿಗೆ ಅನುವಾದಿಸಿದ್ದು, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿದೆ. 1974-75ರ ಅವಧಿಯಲ್ಲಿ ಮೂರು ಗ್ರಂಥಗಳು ಪ್ರಕಟವಾಗಿವೆ.
©2024 Book Brahma Private Limited.