ಮರಾಠಿ ಮಣ್ಣಿನ ಕನ್ನಡ ಗಮ್ಮತ್ತು ಉಪಶೀರ್ಷಿಕೆಯ ಜಾನಪದ ನಾಟಕ ‘ತಮಾಶಾ’ ಕೃತಿಯನ್ನು ಲೇಖಕ ಡಿ.ಎಸ್. ಚೌಗಲೆ ರಚಿಸಿದ್ದಾರೆ. ಜಾನಪದ ರಂಗಪ್ರಕಾರಗಳಿಗೂ ತಮಾಶಾಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಈ ತಮಾಶಾಗಳು ಮರಾಠಿ ನೆಲದ ಗುಣ ವಿಶೇಷವೇ ಆಗಿದೆ. ಆದರೆ, ಕನ್ನಡದ ಸೊಗಡನ್ನು ಒಳಗೊಂಡಿವೆ. ಜಾನಪದ ರಂಗಪ್ರಕಾರಗಳಲ್ಲಿ ‘ಗೊಂಧಳ’ ಪ್ರಕಾರದಂತೆ ‘ತಮಾಶಾ’ವೂ ಕಲಾ ನಿರೂಪಣೆಯನ್ನು ಹೊಂದಿದೆ. ಮೊದಲಮೊದಲು ಹಿಲಾಲು ಬೆಳಕಲ್ಲಿ ತಮಾಶಾ ನಡೆಯುತ್ತಿತ್ತು. ಬೀದಿ ನಾಟಕಗಳ ಪೈಕಿ ಬಯಲಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಒಂದೂರಿನಿಂದ ಮತ್ತೊಂದೂರಿಗೆ ಕಲಾವಿದರು ಎತ್ತಿನ ಗಾಡಿಯಲ್ಲಿ ಸಂಚರಿಸುತ್ತಿದ್ದರು. ಈ ಜಾನಪದ ರಂಗಪ್ರಕಾರಕ್ಕೆ ಬಹು ಹಿಂದಿನ ಇತಿಹಾಸವಿದೆ. ತಿರುಗಾಟದ ತಂಡವಾಗಿ ‘ತಮಾಶಾ’ ನಡೆಯುತ್ತಿದ್ದವು. ಒಂದರ್ಥದಲ್ಲಿ ಇವು ಲಾವಣಿಗಳಿದ್ದಂತೆ. ಅಧ್ಯಾತ್ಮವನ್ನೂ ಉಸಿರಾಡುತ್ತವೆ. ‘ತಮಾಶಾ’ ನಾಟಕದ ಮೌಖಿಕ ಪಠ್ಯವನ್ನು ಪಠ್ಯೆ ಬಾಪುರಾವ್ ನೀಡಿದ್ದು, ಅದನ್ನು ಸಮಕಾಲೀನ ಸ್ವರೂಪದಲ್ಲಿ ಪರಿಷ್ಕರಿಸಿ ನೀಡಲಾಗಿದೆ ಎಂದು ಕೃತಿ ರಚನೆಕಾರರು ಕೃತಿಗೆ ಬರೆದ ‘ನನ್ನ ಮಾತು’ಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.