`ಹಿರಿಯೂರು ಸೀಮೆ' ಎಂ.ಜಿ ರಂಗಸ್ವಾಮಿ ಅವರ ಕೃತಿಯಾಗಿದೆ. ಗ್ರಾಮದ ಸಂಸ್ಕೃತಿಯನ್ನು ರೂಪಿಸುವಲ್ಲಿ ಗ್ರಾಮದೇವತೆಯೋ, ಯಾವುದೋ ಒಂದು ಅಧಿದೈವವೋ ಪ್ರಮುಖ ಪಾತ್ರವಹಿಸುತ್ತದೆ. ಒಂದು ಗ್ರಾಮದ ಆತ್ಮವೇ ಆ ದೈವದ ಆರಾಧನೆ, ಆಚರಣೆಗಳಲ್ಲಿ ಅಡಗಿರುತ್ತದೆ. ಹಿರಿಯೂರು ಸೀಮೆಯ ಎಲ್ಲ ಗ್ರಾಮ ದೈವಗಳನ್ನು ವ್ಯಾಪಕವಾದ ಹೀಗಾಗಿ ರಂಗಸ್ವಾಮಿಯವರು ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ನಡೆಸಿದ್ದಾರೆ, ಅವುಗಳ ಐತಿಹ್ಯಗಳನ್ನೆಲ್ಲ ಕೆದಕಿದ್ದಾರೆ. ಹೀಗಾಗಿ ಇಲ್ಲಿ ಜನಪದ ದೈವಗಳ ಒಂದು ಮೆರವಣಿಗೆ ಸಾಗಿದೆ. ಹೀಗಾಗಿ ಈ ದೈವಗಳ ಅಧ್ಯಯನದ ಮೂಲಕ ಆ ಹಳ್ಳಿಗಳ ಆತ್ಮವನ್ನೇ ಬಿಚ್ಚಿಟ್ಟು ನಿಜವಾದ ಜನಪದ ಸಂಸ್ಕೃತಿಯ ದರ್ಶನ ಮಾಡಿಸಿದ್ದಾರೆ. ಹಾಗೂ ಈ ಸೀಮೆಯ ಸಂಸ್ಕೃತಿಯನ್ನು ರೂಪಿಸುವಲ್ಲಿ ದೈವಗಳಷ್ಟೇ ಪ್ರಮುಖ ಪಾತ್ರವಹಿಸಿದ ಅನೇಕ ಧೀಮಂತ ವ್ಯಕ್ತಿಗಳ ಜೀವನ ಚಿತ್ರಣದ ಮೂಲಕ ಹಿರಿಯೂರು ಸೀಮೆಯ ಅಧ್ಯಯನಕ್ಕೆ ಒಂದು ಪರಿಪೂರ್ಣತೆಯನ್ನು ತಂದಿದ್ದಾರೆ ಎನ್ನುತ್ತಾರೆ ಮೀರಾಸಾಬಿಹಳ್ಳಿ ಶಿವಣ್ಣ.
©2024 Book Brahma Private Limited.