ಜೀವವಿಜ್ಞಾನಗಳ ಜಗತ್ತಿನ ಚೌಕಟ್ಟು ಅಖಂಡ ಜಗತ್ತಿನ ಚೌಕಟ್ಟಿನಷ್ಟೇ ವಿಸ್ತಾರವುಳ್ಳದ್ದು. ಈ ಜಗತ್ತು ಹುಟ್ಟಿದಂದಿನಿಂದ ಇಲ್ಲಿಯವರೆಗೆ ಅದು ತಳೆದ ರೂಪ, ಪಡೆದ ಸ್ವರೂಪ, ದಕ್ಕಿಸಿಕೊಂಡ ವೈವಿಧ್ಯ, ವೈಚಿತ್ರ ಮತ್ತು ಅದ್ಭುತಗಳು ಹಲವು. ಜೀವಿಗಳು ಕ್ರಮಿಸಿ ಬಂದ ಲಕ್ಷಾಂತರ ವರ್ಷಗಳ ವಿಕಾಸದ ಹಾದಿಗಳು ನಮಗೆ ದಿಗ್ರಮೆ ಹುಟ್ಟಿಸುವಂತಹದ್ದು. ಈ ವಿಶ್ವಕೋಶದಲ್ಲಿ ಜೀವನದ ಉಗಮ, ಜೀವಕೋಶ-ಜೀವಸಾಮ್ರಾಜ್ಯ ಪೋಷಣೆ, ಸಜೀವ ಪ್ರಕ್ರಿಯೆಗಳು, ಮಾನವನ ಅನುವಂಶೀಯತೆ, ಪರಿಸರಶಾಸ್ತ್ರ, ಆರ್ಥಿಕತೆ ಮುಂತಾದ ಹಳ್ಳಿ ವಿವರಣಾ ಘಟಕಗಳಿವೆ. ಜೀವ ಜಗತ್ತಿನ ವಿಸ್ಕತ ಜ್ಞಾನವನ್ನು ಈ ಕೋಶ ಉಣಬಡಿಸುತ್ತಿದೆ'
©2024 Book Brahma Private Limited.