About the Author

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ.

ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ಮರಗಳು -(2017),  ಜೀವ ಉಳಿಸುವ ಕಳೆಗಳು-(2018), ನಮ್ಮೂರ ಜನಪದ ಗಣಿತ-(2011),  ಸುಕ್ರಿ ಬೊಮ್ಮಗೌಡ -(2011),  ಕನ್ನಡ ಜನಪದ ಸಸ್ಯನಾಮಗಳು (2011) ಕೃತಿಗಳು ಪ್ರಕಟವಾಗಿದೆ.

ಪ್ರಶಸ್ತಿ-ಗೌರವಗಳು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಲಲಿತಾಂಬ ವೃಷಭೇಂದ್ರ ಸ್ವಾಮಿ ಸಾಹಿತ್ಯ ದಂಪತಿ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ  (2001),  ಉತ್ತಮ ಶಿಕ್ಷಕಿ ಪ್ರಶಸ್ತಿ ಜಿಲ್ಲಾ ಉತ್ತಮ ಲೇಖಕಿ ಪ್ರಶಸ್ತಿ ಸಂದಿದೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯರು,  ಜಾನಪದ ಸಂಪುಟ ಯೋಜನೆಯ ಸಂಪಾದಕ ಮಂಡಳಿ ಸದಸ್ಯೆ, ಜಾನಪದ ನಿಘಂಟು ಯೋಜನೆಯ ಜಿಲ್ಲಾ ಸಂಪಾದಕರು,  ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕರಾವಳಿ ಜಿಲ್ಲೆಗಳ ಜಾನಪದ ಪಾನೀಯ ಕಾರ್ಯಕ್ರಮ ಸಂಘಟಿಸಿ ಅಸರ ಎಂಬ ಕೃತಿ ಪ್ರಕಟಣೆ ಮಾಡಿದ್ದಾರೆ. 

ಜಾನಪದ ಪ್ರಕಾಶನ ಸಂಸ್ಥೆಯ ಹಾಗೂ ಭೂಮಿ ಜಾನಪದ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರು, ಜಾನಪದ ಸಸ್ಯವೈದ್ಯಕೇತ್ರದಲ್ಲಿ ಸೇವೆ, ಔಷಧೀಯ ಸಸ್ಯಗಳನ್ನು ಮನೆ ಅಂಗಳದಲ್ಲಿ ಬೆಳೆಸುವ ಹವ್ಯಾಸ ಇವರಿಗಿದೆ.  ಮಹಿಳೆಯರಿಗೆ ಮಕ್ಕಳಿಗೆ ಮನೆಮದ್ದುಗಳ ತಯಾರಿಕೆಯ ಪರಿಚಯ, ಹೊನ್ನಾವರದಲ್ಲಿ ಸಮತಾವೇದಿಕೆ ಸ್ಥಾಪಿಸಿ ಮಹಿಳೆಯರ ಪ್ರಗತಿಪರ ಕೆಲಸಗಳು ಹಾಗೂ  ಭೂಮಿ ಮಹಿಳಾ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

ಶಾಂತಿ ನಾಯಕ

(27 Mar 1943)