ಪ್ರದೇಶದ ಹವಾಮಾನ, ಆಯಾ ಋತುಮಾನ ಅಲ್ಲಿಯ ಬೆಳೆ ಮುಂತಾದವುಗಳ ಆಧಾರದ ಮೇಲೆ ಅಲ್ಲಿಯ ಜನರ ಆಹಾರ ಪದ್ದತಿ ನಿರ್ಧರಿಸಲ್ಪಡುತ್ತದೆ. ಕೃತಿಯ ಹೆಸರೇ ಸೂಚಿಸುವಂತೆ ಲೇಖಕರು ಬೀದರ ಜಿಲ್ಲೆಯ ಆಹಾರ ಪದ್ಧತಿ, ಸಂಸ್ಕೃತಿಯ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ, ಆಹಾರ ಹಾಗೂ ಜನರ ಆರೋಗ್ಯಕ್ಕೂ ಇರುವ ಅಂರ್ತಸಂಬಂಧವನ್ನು ವೈಜ್ಞಾನಿಕವಾಗಿ ಲೇಖಕಿ ಡಾ.ಶಿವಗಂಗಾ ರುಮ್ಮಾ ಅವರು ಬೆಳಕು ಚೆಲ್ಲಿದ್ದಾರೆ.
ಪಾಶ್ಚಾತ್ಯ ಪ್ರಭಾವಿತ ಆಧುನಿಕ ಜೀವನಶೈಲಿ ಹಾಗೂ ಜಾಗತೀಕರಣದ ಫಲವಾಗಿ ಬಹು ಸಂಸ್ಕೃತಿಯ ಭಾಗವಾದ ಆಹಾರಪದ್ಧತಿ ನೇಪಥ್ಯಕ್ಕೆ ಸರಿದು ನಿರ್ಭಿಜಿಕರಣದ ಸತ್ವಹೀನ ಸಮಾಜ ನಿರ್ಮಾಣದಲ್ಲಿ ಆಹಾರಪದ್ಧತಿ ಅದರ ಮಹತ್ವ ಎತ್ತಿತೋರಿಸುವ ಸಮಷ್ಟಿ ಪ್ರಜ್ಞೆ ಹಾಗೂ ಸಾಂಸ್ಕೃತಿಕ ಕಾಳಜಿ ಈ ಕೃತಿಯಲ್ಲಿದೆ. ಇಡೀ ಜಗತ್ತಿನಲ್ಲಿ ಭಾರತದ ಸಂಸ್ಕೃತಿ ನೆಲ ವಾಗಿದ್ದು ಇಲ್ಲಿ ಪ್ರಾದೇಶಿಕವಾಗಿ ಆಹಾರದಲ್ಲಿ ವೈವಿಧ್ಯತೆ ಇರುವುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.ದೇಸಿ ಆಹಾರ ವಿಮುಖತೆ ಯಿಂದಾಗಿಯೇ ನಾವು ಹಲವು ರೋಗಗಳಿಗೆ ತುತ್ತಾಗುತ್ತಿದ್ದು ಒಂದು ಪ್ರದೇಶದ ಆಹಾರ ಸಂಸ್ಕೃತಿಯನ್ನು ದಾಖಲೀಕರಣ ವಾಗಿ ಈ ಕೃತಿ ಮಹತ್ವ ಪಡೆದುಕೊಂಡಿದೆ.
©2024 Book Brahma Private Limited.