ಜಾನಪದ ಪಠ್ಯಗಳ ಇಂದಿನ ಕಾಲಕ್ಕೆ ತಕ್ಕಂತೆ ಮರುಸೃಷ್ಟಿಸುವ ಕಲಾತ್ಮಕ ಪ್ರಯೋಗದ ಸಾರಾಂಶವೇ ನಮ್ಮೂರ ಜಾನಪದ ಅನುಸಂಧಾನ. ಶಾಲಾ ಮಕ್ಕಳ ಜನಪದ ಪಠ್ಯ ಅಂತರ್ಗತ ಪ್ರಯೋಗಗಳಿಗಾಗಿ ರಚಿತವಾದ ಕೃತಿಯಾಗಿದೆ. ಶಾಲಾ ಮಕ್ಕಳಿಗೆ ಜನಪದ ಜ್ಞಾನವನ್ನು ಒದಗಿಸುವ ಸಲುವಾಗಿ ತರಗತಿ ಕೋಣೆಯಲ್ಲಿ ಜನಪದ ಕಲಾಂತರ್ಗತ ಪ್ರಯೋಗಗಳನ್ನು ನಡೆಸಲು ಉಪಯುಕ್ತ ಕೃತಿಯಾಗಿದೆ . ಶಾಲಾ ಮಕ್ಕಳ ಕನ್ನಡ ,ಗಣಿತ ಪರಿಸರ ಅಧ್ಯಯನ,ವಿಜ್ಞಾನದ ಪಠ್ಯ ಅಂಶಗಳನ್ನು, ಒಳಗೊಂಡಂತೆ ಜನಪದದ ಸರಳ ಶೈಲಿ, ಲಯದಲ್ಲಿ ಜನಪದಗಳನ್ನು ಮರುಸೃಷ್ಟಿ ಸಲಾಗಿದೆ. ಇಂದಿನ ಸಾಂವಿಧಾನಿಕ ಅಶೋತ್ತರಗಳಿಗೆ ಅನುಗುಣವಾಗಿ ಜನರಿಗೆ ವೈಜ್ಞಾನಿಕ ತಿಳುವಳಿಕೆ ಮೂಡಿಸಲು ಜಾನಪದ ಶೈಲಿಯನ್ನು ಉಳಿಸಿಕೊಂಡು ಮರುಸೃಷ್ಟಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಸೋಬಾನೆ ಹಾಡುಗಳನ್ನು ಅಂತರ್ಜಾತಿ ಮದುವೆ ಹಾಡುಗಳನ್ನಾಗಿಯು, ಜಲ ಸಂರಕ್ಷಣೆ, ಪರಿಸರ ಕಾಳಜಿ, ಡೊಳ್ಳಿನ ಪದಗಳು ,ಶೈಕ್ಷಣಿಕ ಅರಿವು ಮೂಡಿಸಲೆಂದೇ ಈ ಜನಪದಗಳನ್ನು ರಚಿಸಲಾಗಿದೆ.
©2024 Book Brahma Private Limited.