ಜನಪದ ಸಾಹಿತ್ಯದ ವಿಸ್ತಾರ ಬಹಳ ದೊಡ್ಡದು. ಕನ್ನಡ ಸಾಹಿತ್ಯವನ್ನು ಪೂರ್ಣವಾಗಿ ಅವಲೋಕಿಸಿದಾಗ ಶಿಷ್ಟ ಹಾಗೂ ಜನಪದ ಸಾಹಿತ್ಯದಲ್ಲಿ ಪವಾಡಗಳು ಸಾಕಷ್ಟು ಗೋಚರಿಸುತ್ತದೆ. ವಿಶಾಲವಾಗಿ ವ್ಯಾಪಿಸಿರುವ ಕನ್ನಡ ಸಾಹಿತ್ಯದ ಬಗ್ಗೆ ಇದರ ವಿವಿಧ ಪ್ರಕಾರಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ, ಪ್ರಸ್ತುತ ನಡೆಯುತ್ತಲೇ ಇದೆ. ಆದರೆ ಜನಪದ ಸಾಹಿತ್ಯದಲ್ಲಿರುವ ಪವಾಡಗಳ ಬಗ್ಗೆ ಪ್ರಪ್ರಥಮ ಬಾರಿಗೆ ಗಂಭೀರವಾಗಿ “ಸರಸ್ವತಿ ಶ್ರೀಕಂಠಯ್ಯ”ನವರು ಗಮನ ಹರಿಸಿದ್ದಾರೆ. ಈ ಕೃತಿಯು ಏಳು ಅಧ್ಯಾಯಗಳಲ್ಲಿ ಪವಾಡದ ನಿಷ್ಪತ್ತಿಯಿಂದ ಮೊದಲ್ಗೊಂಡು ಜನಪದ ಕಾವ್ಯ ಕತೆಗಳಲ್ಲಿ ಬರುವ ಪವಾಡಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಜನಪದ ಸಾಹಿತ್ಯದ ಪವಾಡಗಳ ಬಗ್ಗೆ ಇದೇ ಮೊದಲ ಭಾರಿಗೆ ಕೃತಿ ರಚನೆಯಾಗಿದೆ.
©2024 Book Brahma Private Limited.