ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ ಅವರ ಜಾನಪದ ನಾಟಕ ಕೃತಿ-ʼಪಾರಿಜಾತದವರುʼ ನಾಟಕ ಪ್ರಪಂಚದಲ್ಲಿಯೇ ಹೊಸ ಪ್ರಯೋಗವನ್ನು ಸೃಷ್ಟಿಸಿದ ಜಾನಪದ ನಾಟಕ ಪ್ರಕಾರವಾಗಿದೆ. ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಇಬ್ಬರಿಗೂ ಸಲ್ಲಬಹುದಾದ ನಾಟಕವಿದಾಗಿದೆ. ಪಾರಿಜಾತ ಕಲಾವಿದರು ಅನುಭವಿಸುವ ಕಷ್ಟ-ನಷ್ಟಗಳ ಸಂಗಡವೇ ಈ ಕಲಾವಿದರು ಅನುಭವಿಸುವ ಅನಂತ ರಂಗಸುಖವೂ ಇಲ್ಲಿ ಬಿಂಬಿಸಲ್ಪಟ್ಟಿದೆ. ಹುನಗುಂದದ ಧ್ರುವರಂಗ ಹಾಗೂ ಬಾಗಲಕೋಟೆಯ ವಾಸುದೇವ ವಿನೋದಿನಿ ನಟ್ಯ ಸಭೆಯವರಿಂದ ಹಲವು ಪ್ರಯೋಗ ಕಂಡಿವೆ. ಈ ಕೃತಿಗೆ ಮುನ್ನುಡಿ ಬರೆದಿರುವ ಪ್ರಭಾಕರ ಕುಲಕರ್ಣಿ, ಪತ್ರಿಯೊಂದು ವಸ್ತುವಿನಲ್ಲೂ ಹೊಸತನ ಹಾಗೂ ಗಟ್ಟಿತನವಿದೆ ಹೇಳಿರುವ ರೀತಿ ಕೂಡ ಅಷ್ಟೇ ಸಮರ್ಪಕಾತ್ಮಕವಾಗಿದೆ. ಜಾನಪದ ವಿಚಾರಗಳ ಹಿಂದಿರುವ ನೋವು, ವಿವಿಧ ಮಾನಸಿಕ ತುಮುಲಗಳು, ಸಂಘರ್ಷ ಇವೆಲ್ಲವುಗಳನ್ನು ಮೀರಿ ಶ್ರೀ ಕೃಷ್ಣ ಪಾರಿಜಾತದ ಬಗ್ಗೆ ಇರುವ ಅಗಮ್ಯವಾದ ಸೆಳೆತ ಹಾಗೂ ಆಕರ್ಷಣೆಯನ್ನು ಓದುಗರ ಮುಂದೆ ಬಿಚ್ಚಿಡುತ್ತದೆ ಈ ನಾಟಕ ಪ್ರಕಾರ. ಶ್ರೀ ಕೃಷ್ಣ ಪಾರಿಜಾತದ ಪ್ರತಿ ಪ್ರಯೋಗದ ಹಾಗೂ ಅವರ ಒಟ್ಟು ಸಂಘಟನೆಯ ಹಿಂದಿರುವ ಮಾನವೀಯ ಮೌಲ್ಯಗಳ ಸ್ಪಂದನ ಸ್ಪಷ್ಟವಾಗಿ ನಾವು ಇಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. .
©2024 Book Brahma Private Limited.