ಜನಪದ ಚಾರಿತ್ರಿಕ ಕಥನ ಕಾವ್ಯಗಳಲ್ಲಿ ರೂಪಾಂತರ ಕಡಿಮೆ: ಹಾಡುವ ಧಾಟಿಯು ಬದಲಾಗುವುದಿಲ್ಲ. ಯಾವ ಮಟ್ಟಿದಲ್ಲಿ ವಕ್ತೃ ಹಾಡು ಕಲಿತಿರುತ್ತಾರೋ ಅದೇ ಮಟ್ಟನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೇ ಅದರದೇ ಆದ ಲಯವಿರುತ್ತದೆ. ಛಂದಸ್ಸಿರುತ್ತದೆ. ಸಿದ್ಧ ರೂಪವಿರುತ್ತದೆ. ಹೆಸರೇ ಸೂಚಿಸಿರುವಂತೆ ಜನಪದ ಚಾರಿತ್ರಿಕ ಕಥನ ಕಾವ್ಯಗಳಲ್ಲಿ ಚರಿತ್ರೆಗೆ ಸಂಬಂಧಿಸಿದ ಕತೆ ಇರುತ್ತದೆ. ಇದರಲ್ಲಿ ಮಾಗಡಿ ಕೆಂಪೇಗೌಡ, ಸರ್ಜಪ್ಪನಾಯಕ, ಧೋಂಡಜಿ ವಾಘ, ಸಂಗೊಳ್ಳಿ ರಾಯಣ್ಣ, ಐಗೂರ ಕತೆ, ಸರ್ಜಪ್ಪ ನಾಯಕನ ಕಥನಕಾವ್ಯ, ಬಾಜೀರಾಯನ ಹಾಡು, ಕಿತ್ತೂರ ಚಂನವ್ವನ ಸೊಸಿ ಪದ, ಬಾದಾಮಿ ಕಲ್ಲೆ ಕೆಡವಿದ ಪದ, ನರಗುಂದ ಸಂಸ್ಥಾನದ ಪದ, ರಾಮದುರ್ಗದ ದುರಂತ, ಸಂಗೊಳ್ಳಿ ರಾಯಣ್ಣ, ಚಾರಿತ್ರಿಕ ಕೋಲಾಟದ ಪದಗಳು, ಸರ್ಜಪ್ಪ ನಾಯಕನ ಪದ, ಟಿಳಕನ ಕತೆ ಮುಂತಾದ ಜಾನಪದ ಕಥನಗಳು ಈ ಕೃತಿಯಲ್ಲಿವೆ.
©2024 Book Brahma Private Limited.