ಚಕ್ಕೆರೆ ಶಿವಶಂಕರ್ ಅವರ ಅಧ್ಯಯನ ಕೃತಿ ‘ಜಾನಪದ ಪ್ರವೇಶ’. ಈ ಕೃತಿಯ ಪರಿವಿಡಿಯಲ್ಲಿ ಜನಪದ ಸಾಹಿತ್ಯ ಚರಿತ್ರೆ ಪ್ರವೇಶಿಕೆ, ಜನಪದ ಗದ್ಯ, ಪದ್ಯಗಂಧೀ ಗದ್ಯ- ಸಾಹಿತ್ಯ ಪ್ರಕಾರಗಳು, ಜನಪದ ಹಾಡುಗಳು ಎಂಬ ಮೂರು ಭಾಗಗಳಿವೆ.
ಮೊದಲ ಭಾಗದಲ್ಲಿ ಕನ್ನಡ ದೇಸೀ ಸಾಹಿತ್ಯ ನಡೆದುಬಂದ ದಾರಿ, ಜನಪದ ಸಾಹಿತ್ಯದ ಅಧ್ಯಯನದ ವಿಭಾಗೀಕ್ರಮ, ಕನ್ನಡ ಜಾನಪದ ಶಾಸ್ತ್ರೀಯ ಅಧ್ಯಯನ, ಹೈದರಾಬಾದ ಕರ್ನಾಟಕ ಜನಪದ ಸಾಹಿತ್ಯ: ಪರಂಪರೆ, ಅನುವಾದಗೊಂಡು ಕನ್ನಡಕ್ಕೆ ಬಂದ ಜನಪದ ಸಾಹಿತ್ಯ ಎಂಬ ಶೀರ್ಷಿಕೆಗಳನ್ನು ಒಳಗೊಂಡಿದೆ.
ಎರಡನೇ ಭಾಗದಲ್ಲಿ ಜನಪದ ಗದ್ಯ ಕಥೆಗಳು, ಜನಪದ ಗಾದೆಗಳು, ಜನಪದ ಒಗಟುಗಳು, ಜನಪದ ಒಡಪುಗಳು, ಜನಪದ ಒಡಬುಗಳು, ಜನಪದ ಮಕ್ಕಳ ಹಾಡುಗಳು ಎಂಬ ಶೀರ್ಷಿಕೆಗಳಿವೆ. ಕೃತಿಯ ಮೂರನೇ ಭಾಗವಾದ ಜನಪದ ಹಾಡುಗಳಡಿಯಲ್ಲಿ ಹೊಲ-ಮನೆಕೆಲಸದ ಹಾಡುಗಳು, ಪ್ರದರ್ಶನ ಕಲೆಯ ಹಾಡುಗಳು, ಹಬ್ಬದ ಹಾಡುಗಳು, ಸಂಪ್ರದಾಯದ ಹಾಡುಗಳು, ಹೆಣ್ಣುಮಕ್ಕಳ ಜನಪದ ಕಥನ ಗೀತೆಗಳು, ಒಬ್ಬ ವಕ್ತಾರನ ಸಮಗ್ರ ಸಾಹಿತ್ಯ ಎಂಬ ಅನೇಕ ಶೀರ್ಷಿಕೆಗಳಿವೆ.
©2024 Book Brahma Private Limited.