ಗ್ರಾಮೀಣ ಪ್ರದೇಶಗಳಲ್ಲಿ ’ಬಾಬಯ್ಯ ಹಬ್ಬ’ ಎಂದು ಕರೆಯುವ ಮೊಹರಂ ಹಬ್ಬವು ಇಸ್ಲಾಂನಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಪಾವನ ಪವಿತ್ರ ಇಸ್ಲಾಂ ಧರ್ಮದ ಹಬ್ಬಗಳಲ್ಲಿ ಒಂದಾಗಿರುವ ಮೊಹರಂ ಬಗ್ಗೆ ದಸ್ತಗೀರ್ ಅಲ್ಲೀಭಾಯಿ ಅವರು ಈ ಕೃತಿಯಲ್ಲಿ ವಿವರಿಸುತ್ತಾರೆ. ಈ ಪುಸ್ತಕದಲ್ಲಿ ಇಸ್ಲಾಂ ಧರ್ಮದಲ್ಲಿ ನಡೆದ ಪ್ರಮುಖ ಘಟನೆಗಳು, ಪ್ರಮುಖ ಪ್ರವಾದಿಯವರ ಕುರಿತು, ಅವರು ಜೀವನ ನಡೆಸಿದ ರೀತಿ, ಬದುಕಿನ ಶೈಲಿ ಎಲ್ಲವನ್ನು ಇಲ್ಲಿ ಸರಳವಾಗಿ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮೊಹರಂ ಎಂದರೆ , ಇಸ್ಲಾಂ ಧರ್ಮದ ಮೊದಲ ತಿಂಗಳು ,ಅಲ್ಲಿಂದ ಇಸ್ಲಾಂ ಧರ್ಮದ ತಿಂಗಳು ಆರಂಭವಾಗುತ್ತದೆ ಎಂದು ಮೊಹರಂ ಬಗ್ಗೆ ವಿವರಿಸುವ ಈ ಕೃತಿಯೂ , ಮೊಹರಂ ಹಿಂದೂ -ಮುಸ್ಲಿಮರಲ್ಲಿ ಹೇಗೆ ಸೌರ್ಹಾದತೆಯನ್ನು ಉಂಟುಮಾಡಿದೆ ಎಂಬುದನ್ನು ಈ ಕೃತಿಯೂ ಅತ್ಯಂತ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಜಾನಪದ ಸಾಹಿತ್ಯ, ಬದುಕು,ಧರ್ಮ, ಮತ್ತು ಒಟ್ಟು ಜೀವನ ಶೈಲಿ ಎಲ್ಲವೂ ಈ ಕೃತಿಯಲ್ಲಿ ಸುಂದರವಾಗಿ ಮೂಡಿ ಬಂದಿದೆ.
©2024 Book Brahma Private Limited.