‘ನಿರೂಪಣೆಯಾಚೆಗೆ’ ಕೃತಿಯು ಶೈಲಜ ಇಂ. ಹಿರೇಮಠ ಅವರ ಜನಪದ ಸಾಹಿತ್ಯ ಮತ್ತು ಮಹಿಳಾ ವಿಚಾರಗಳ ಕುರಿತ ಬರವಣಿಗೆಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ‘ಮಹಿಳಾ ಜನಪದ’ ಎನ್ನುವ ಪರಿಭಾಷೆಯಲ್ಲಿ ಅನೇಕರು ಅಧ್ಯಯನಗಳನ್ನು ನಡೆಸಿದ್ದಾರೆ. ಆದರೆ ಅಂಥ ಅಧ್ಯಯನಗಳು ಕೂಡಾ ದೇಶೀ ಸ್ತ್ರೀವಾದ ’ವನ್ನು ಕಟ್ಟುವ ಅವಸರದಲ್ಲಿ ಮತ್ತೆ ಮತ್ತೆ ಅನೇಕ ಪಿತೃನಿಷ್ಠ ನೆಲೆಗಳನ್ನು ವಿಜೃಂಭಿಸಿವೆ. ಹೀಗಾಗಿ, ಜನಪದ ಸಾಹಿತ್ಯ ಅದ್ಯಯನ ವಿಧಾನಗಳಲ್ಲಿನ ತೊಡಕುಗಳನ್ನು ಶೋಧಿಸಲು ಪ್ರಸ್ತುತ ಕೃತಿಯು ಪ್ರಯತ್ನ ನಡೆಸಿದೆ. ಏಕಕಾಲದಲ್ಲಿ ಆಯ್ದ ಜನಪದ ಪಠ್ಯಗಳನ್ನು ನೂತನ ವಿಧಾನದಲ್ಲಿ ವಿಶ್ಲೇಷಿಸುವ ಮಾದರಿಗಳನ್ನು ಕೃತಿಯಲ್ಲಿ ಪರಿಚಯಿಸಲಾಗಿದೆ; ಈ ಅಧ್ಯಯನದ ಉದ್ದಕ್ಕೂ ‘ಮಹಿಳಾ ಸಮುದಾಯದಿಂದ ರಚಿತವಾದ ಸಾಹಿತ್ಯ’ ಎನ್ನುವ ಗ್ರಹಿತದಲ್ಲಿಯೇ ಬಳಸುತ್ತಾರೆ; ಆದರೆ ನಾನು ಅ ಅರ್ಥದಲ್ಲಿ ಬಳಸಿಲ್ಲ. ಮಹಿಳೆ ಇಲ್ಲವೇ ಪುರುಷ ನಿರೂಪಕರಿಂದ ಹೇಳಲ್ಪಟ್ಟ, ಇಲ್ಲವೇ ಹಾಡಲ್ಪಟ್ಟ ಸಾಹಿತ್ಯವಾಗಿದ್ದು, ಮಹಿಳಾ ಬದುಕಿನ ವಸ್ತು ವಿಷಯಗಳನ್ನು ಒಳಗೊಂಡಿದ್ದು ಎನ್ನುವ ಅರ್ಥದಲ್ಲಿ ‘ಮಹಿಳಾ ಜನಪದ ಸಾಹಿತ್ಯ’ ಪರಿಭಾಷೆಯನ್ನು ಬಳಸಿದ್ದೇನೆ’ ಎಂದಿದ್ದಾರೆ.
©2024 Book Brahma Private Limited.