ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ಅಧ್ಯಯನ ಕೃತಿ- ‘ಕಲಾಕಥನ' . ಲೇಖಕ ಕೆ.ಜಿ. ಕೆಂಪರಾಜು ಅವರು ಲೇಖಕರು. ಚಾಮರಾಜನಗರ ಜಿಲ್ಲೆಯ ಕಾಗಲವಾಡಿ ಗ್ರಾಮದ ಜನಪದ ಕಲಾವಿದರ ಪರಿಚಯ ಹಾಗೂ ಗ್ರಾಮದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಚಿತ್ರಿಸಲಾಗಿದೆ. ಪ್ರತಿಯೊಬ್ಬ ಕಲಾವಿದರನ್ನು ಭೇಟಿ ಮಾಡಿ ಅವರ ಮಾಹಿತಿ ಸಂಗ್ರಹಿಸಿದ್ದು ವಿಶೇಷ. ಜಾನಪದ ಕಲೆಗಳ ವಿಭಿನ್ನ ರೂಪಗಳು ಇಲ್ಲಿ ಅನಾವರಣಗೊಂಡಿದೆ. ಜಾನಪದ ಮಹಿಳಾ ಕಲಾವಿದರ ಪರಿಚಯವೂ ಜಾನಪದ ಸಾಹಿತ್ಯ ಅಧ್ಯಯನದ ವಿಸ್ತಾರವನ್ನು ತೋರುತ್ತದೆ. ಗ್ರಾಮದ ಸಾಂಸ್ಕೃತಿಕ ಭಿನ್ನಭಿನ್ನ ನೋಟಗಳೊಂದಿಗೆ ಜಾನಪದ, ಕಲೆ, ಕಲಾವಿದರನ್ನು ಒಳಗೊಂಡ ಈ ಕೃತಿಯು ಜಾನಪದ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ.
©2025 Book Brahma Private Limited.