ಹೊನ್ನ ರಾಗೋಲ

Author : ಶ್ರೀಶೈಲ ನಾಗರಾಳ

Pages 176

₹ 180.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಲೇಖಕ ಶ್ರೀಶೈಲ ನಾಗರಾಳ ಅವರ ಜಾನಪದ ಲೇಖನಗಳ ಕೃತಿ ʻಹೊನ್ನ ರಾಗೋಲʼ. ಜಾನಪದದ ಕರಿತು ಹಾಗೂ ಅದರಲ್ಲಿರುವ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ನುಡಿ, ವಿಕಾಸ, ಭೂಮಿಯ- ಜೀವಸಂಕುಲದ ಸೃಷ್ಟಿ ಎಲ್ಲವನ್ನೂ ಕತೆ, ಹಾಡು, ನುಡಿಗಟ್ಟುಗಳಲ್ಲಿ ವಿಭಿನ್ನವಾಗಿ ಕಟ್ಟಿಕೊಟ್ಟ ಜನಪದರ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಲೇಖಕರು ವಿವರವಾಗಿ ಇಲ್ಲಿ ನೀಡಿದ್ದಾರೆ. ಜೊತೆಗೆ ಭೂತೇರು, ಅವರು ಆರಾಧಿಸುವ ಶಕ್ತಿದೇವತೆಗಳು , ಜನಪದ ಶರಣರು ಇತ್ಯಾದಿ ಹೊಸ ವಿಚಾರಗಳ ಕುರಿತಾಗಿಯೂ ಇಲ್ಲಿನ ಲೇಖನಗಳು ಹೇಳುತ್ತವೆ.

About the Author

ಶ್ರೀಶೈಲ ನಾಗರಾಳ
(01 June 1961)

ಲೇಖಕ ಡಾ. ಶ್ರೀಶೈಲ ನಾಗರಾಳ ಅವರು ಮೂಲತಃ ಅವಿಭಜಿತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಬಳಿಯ ಇಜೇರಿ ಗ್ರಾಮದವರು. ತಂದೆ- ಯಮನಪ್ಪ. ತಾಯಿ- ಬಸಮ್ಮ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ದಿಂದ ಪದವಿವರೆಗೂ  ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಡಾ ಎಂ ಎಂ ಕಲಬುರಗಿ ಅವರ ವೀರಶೈವ ಸಾಹಿತ್ಯ ಸಂಶೋಧನೆ (2001) ಕುರಿತು ಎಂ.ಫಿಲ್ ನಂತರ  'ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಜೀವನ ಮತ್ತು ಕೃತಿಗಳು' ವಿಷಯವಾಗಿ ಪಿ.ಎಚ್.ಡಿ  (2007) ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಜಿ.ಡಿ.ಎ.ಎಸ್ (ಡಾ. ಅಂಬೇಡ್ಕರ್ ಸ್ಟಡಿ) ಪದವೀಧರರು. ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ...

READ MORE

Related Books