ಡಾ. ಶ್ರೀಶೈಲ್ ನಾಗರಾಳ ಅವರ "ಜಾನಪದ ದೃಷ್ಟಿ "ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ 14 ಲೇಖನಗಳು ಇದ್ದು, ವಿಶ್ವವ್ಯಾಪಿಯಾದ ಜಾನಪದವನ್ನು ಎಲ್ಲಾ ದೇಶಕಾಲ ಜನಸಮುದಾಯಗಳಲ್ಲಿ ಯಾವ ರೀತಿಯಲ್ಲಿ ಒಂದೇ ಪರವಾಗಿಲ್ಲವೇ ಅಂತೆಯೇ ಲೋಕದೃಷ್ಟಿಯ ಬಗೆಗಿನ ರೂಪ,ಸ್ವರೂಪವೂ ಒಂದೇ ರೀತಿಯಾಗಿಲ್ಲ. ಜಗತ್ತಿನಲ್ಲಿ ಬೇರೆ ಬೇರೆ ದೇಶಗಳ ಜನಪದರಿಗೆ ತಕ್ಕಂತೆ ಅನೇಕತೆಯನ್ನು ಹೊಂದಿದೆ.ಅಷ್ಟೇ ಏಕೆ ಒಂದೇ ಕಾಲದ ಒಂದೇ ಪ್ರದೇಶದ,ಒಂದೇ ಸಮುದಾಯದ ಜೀವನಕ್ರಮ ವರ್ತನೆಗಳ ಬಗೆಗೂ ಜಾನಪದ ದೃಷ್ಟಿಯಲ್ಲಿ ಲೇಖನಗಳು ಇರುವುದನ್ನು ಕಾಣುತ್ತೇವೆ. ಅಲ್ಲದೆ ಜನಪದ ಸಂಸ್ಕೃತಿ ಮತ್ತು ಸಮುದಾಯ, ಜನಪದ ತಂತ್ರಜ್ಞಾನ, ಜನಪದರು -ಶರಣರು ಮತ್ತು ಸೂಪಿಸಂತರು, ಜನಪದ ಜೀವಧ್ವನಿ ಕಡಕೋಳ ಮಡಿವಾಳಪ್ಪ, ಜನಪದ ಕವಿ ಬೆನೂರು ಕಾಕಿಪಿರ, ಮುಂತಾದ ಲೇಖನಗಳು ಗಮನಸೆಳೆಯುತ್ತವೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 120 ಪುಟಗಳಿದ್ದು,110 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
©2024 Book Brahma Private Limited.