‘ಜಾನಪದ ಅನುಶೀಲನ’ ಎಸ್. ಆರ್. ಅರುಣ್ ಕುಮಾರ್ ಅವರ ಜಾನಪದ ಲೇಖನಗಳ ಸಂಕಲನ. ಈ ಕೃತಿಯಲ್ಲಿ ತುಳುನಾಡಿನ ಜಾನಪದದ ಕೆಲವಷ್ಟೇ ಮುಖಗಳನ್ನು ಇಲ್ಲಿಯ ಲೇಖನಗಳು ಒಳಗೊಂಡಿದ್ದರೂ, ಇನ್ನೂ ಇಂಥ ಅನೇಕ ವಿಚಾರಗಳ ಕುರಿತಾದ ಪರ್ಯಾಪ್ತವಾದ ಅಧ್ಯಯನಕ್ಕೆ ಇಂಬುಂಟೆಂಬುದನ್ನು ಇವು ಸಾಬೀತುಪಡಿಸುತ್ತವೆ. ದೇಶ ವಿದೇಶಗಳಲ್ಲಿ ಪ್ರಸ್ತುತ ಪ್ರಚಾರವಾಗುತ್ತಿರುವ ಜಾನಪದ ಶಾಸ್ತ್ರ ಸಿದ್ಧಾಂತಗಳಿಗೆ ಲೇಖಕರು ಅತಿಮಹತ್ವ ನೀಡದೆ, ತಮ್ಮದೇ ಆದ ರೀತಿಯಲ್ಲಿ ಬಹುಜನರಿಗೆ ವಿಚಾರಗಳು ತಲುಪುವ ನಿಟ್ಟಿನಲ್ಲಿ ಬರೆಹಗಳನ್ನು ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.