‘ಜನಪದ ಕಾವ್ಯ ಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು’ ಡಾ. ವೀರಣ್ಣ ದಂಡೆಯವರ ಕೃತಿ. ವೀರಣ್ಣದಂಡೆಯವರು ಜಾನಪದ ಕ್ಷೇತ್ರದಲ್ಲಿ ವಿಶಿಷ್ಟವಾದುದ್ದನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಈ ಕೃತಿಯಲ್ಲಿ ಜನಪದ ಕಾವ್ಯದ ಸಾರ್ವಕಾಲಿಕ ಲಕ್ಷಣಗಳನ್ನು ಅಂತೆಯೇ ಪರಿಣಾಮಗಳನ್ನು ಸೂಚಿಸಿದ್ದಾರೆ. ಇಲ್ಲಿ ಜಾನಪದ ಸಾಹಿತ್ಯದ ಅದ್ಭುತ ಸಿದ್ಧಿಗಳಿಗೆ ಕಾರಣವಾಗಬಹುದಾದ ಅನೇಕ ವಿಮರ್ಶಾ ಮಾನದಂಡಗಳು ಜಾನಪದ ಸಾಹಿತ್ಯದೊಳಗೇ ಅಂತರ್ಗತವಾಗಿವೆ ಎಂಬುದನ್ನು ತೋರಿಸಿಕೊಡುತ್ತಾರೆ. ಹೀಗಾಗಿ ದಂಡೆ ಅವರ ಕನ್ನಡ ಜಾನಪದ ಕಾವ್ಯ ಮೀಮಾಂಸೆಯ ಬಗೆಗಿನ ಮೌಲಿಕವಾದ ಬರಹಗಳು ಹಲವಾರು ಪ್ರಧಾನ ಚರ್ಚೆ ವಾಗ್ವಾದಗಳನ್ನು ನಡೆಸಿವೆ, ಆ ಮೂಲಕ ಜಾನಪದ ವಿದ್ವತ್ ಲೋಕ ವಿಶೇಷ ಅಧ್ಯಯನ ಮಾಡಲು ಮತ್ತು ಪರಾಮರ್ಶಿಸಲು ಅವಕಾಶ ಮಾಡಿಕೊಟ್ಟಿದೆ.
©2025 Book Brahma Private Limited.