ಲೇಖಕ ಕೆ.ಎಂ. ಮೇತ್ರಿ ಅವರ ಜಾನಪದ ಕೃತಿ ಎಲ್ಲಮ್ಮನ ಕಥನ ಕಾವ್ಯ. ನಿರಕ್ಷರಿ ಅಲೆಮಾರಿ ಬುಡ್ಗ ಜಂಗಮರ ಬುರ್ರಕಥಾ ಈರಮ್ಮ ಕನ್ನಡ ನಾಡಿನ ಅದ್ವಿತೀಯ ಅಪರೂಪದ ಪ್ರತಿಬೆ.ತನ್ನ ಇಡೀ ಬದುಕನ್ನು ಜನಪದ ಕಥನಕಾವ್ಯಗಳ ಗಾಯನಕ್ಕಾಗಿಯೇ ಮುಡಿಪಿಟ್ಟವರು.ಇವರ ಅಪಾರ ಕಥನಗೀತೆಗಳಲ್ಲಿ ಈ ಪುಸ್ತಕವು ಪ್ರಸ್ತುತ ಏಲ್ಲಮ್ಮನ ಕಥನ ಕಾವ್ಯ ಮತ್ತು ಬುರ್ರಮ್ಮನ ಆತ್ಮಕತನವನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು. ಕೃತಿಯ ಪರಿವಿಡಿಯಲ್ಲಿ ಮಾಋಷಿ ಮತ್ತು ಎಲ್ಲಮ್ಮನ ಜನನ, ಜಮ್ಮಿಗಿರಿ ಪಟ್ನದಲ್ಲಿ ಎಲ್ಲಮ್ಮನ ಬೆಳವಣಿಗೆ, ಎಲ್ಲಮ್ಮನ ಮದುವೆ, ಎಲ್ಲಮ್ಮನ ಪತಿಭಕ್ತಿ, ಮಾಋಷಿಯ ತಪಸ್ಸು, ಹಿರೆಬ್ಯಾನೆ, ಎಲ್ಲಮ್ಮನ ಸತ್ವ ಪರೀಕ್ಷೆ ಮತ್ತು ಪರಶುರಾಮನ ಜನನ, ಪರಶುರಾಮನ ಬಾಲ್ಯ ಜೀವನ ಇಂತಹ 23 ಶೀರ್ಷಿಕೆಗಳ ಬರಹಗಳಿವೆ.
©2024 Book Brahma Private Limited.