ಹಿರಿಯ ಲೇಖಕಿ ಡಾ. ಶಕುಂತಲಾ ದುರ್ಗಿ ಅವರ ಕೃತಿ-‘ಉತ್ತರ ಕರ್ನಾಟಕ ಜಾನಪದ ಆಚರಣೆಗಳು’. ಒಟ್ಟು ನಾಲ್ಕು ಭಾಗಗಳಿದ್ದು. ಮೊದಲನೇ ಭಾಗದಲ್ಲಿ ಜಾನಪದ ಕೌಟುಂಬಿಕ ಆಚರಣೆಗಳಲ್ಲಿ ಜನನ ಸಂಸ್ಕಾರಗಳು,ಬಾಲ್ಯ, ಎರಡನೇ ಭಾಗದಲ್ಲಿ ಮದುವೆಯ ಆಚರಣೆಗಳು,ಮದುವೆಯ ಪೂರ್ವಘಟ್ಟ, ಮದುವೆ ಆರಂಭದ ಘಟ್ಟ,ಮದುವೆ ಸಿದ್ಧತೆ,ಮದುವೆಯ ವೈಭವದ ಘಟ್ಟ, ಮೂರನೇ ಭಾಗದಲ್ಲಿ ಕುಪ್ಪಸ ಕಾರಣ, ಮರಣೋತ್ತರ ಆಚರಣೆಗಳು, ಹಾಗೂ ಭಾಗ ನಾಲ್ಕರಲ್ಲಿ ಸಂಪ್ರದಾಯದ ಹಾಡುಗಳು, ಒಡಪುಗಳು ಸೇರಿದಂತೆ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಉತ್ತರ ಕರ್ನಾಟಕದ ಜಾನಪದ ಆಚರಣೆಗಳನ್ನು ಈ ಕೃತಿ ವಿವರಿಸುತ್ತದೆ.
©2024 Book Brahma Private Limited.