ಡಾ. ಬಸವರಾಜ ಪೊಲೀಸ್ ಪಾಟೀಲ್ ಅವರ" ಜಾನಪದ ಸಂಪದ" ಎನ್ನುವ ಸಮಗ್ರ ಜನಪದ ಸಾಹಿತ್ಯ ಸಂಪುಟವನ್ನು ಅವಲೋಕಿಸಿದಾಗ ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೇ ಭಾಗದಲ್ಲಿ ಜನಪದ ಸಾಹಿತ್ಯ ಕಲೆ ಸಂಸ್ಕೃತಿಯ ಕುರಿತು,ಎರಡನೇ ಭಾಗದಲ್ಲಿ ಜಾನಪದ ಸಾಹಿತ್ಯದ ಪ್ರಕಾರಗಳು, ಮೂರನೇ ಭಾಗದಲ್ಲಿ ಜಾನಪದ ಸಂಪ್ರದಾಯ ಮತ್ತು ಆಚರಣೆಗಳ ಕುರಿತು,ನಾಲ್ಕನೇ ಭಾಗದಲ್ಲಿ ಜಾನಪದ ವಿಮರ್ಶೆ ಮತ್ತು ಸಂಶೋಧನೆ ಕುರಿತು ವೈವಿಧ್ಯಪೂರ್ಣವಾದ ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಬಹುದೊಡ್ಡ ಕೆಲಸ ಮಾಡಿದ್ದು. ಕಲ್ಯಾಣ ಕರ್ನಾಟಕದ ಮೌಖಿಕ ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದಕ್ಕೆ ಪ್ರಮುಖವಾದ ಆಕಾರ ಗ್ರಂಥವಾಗಿದೆ. ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 480 ಪುಟಗಳು ಇದ್ದು 430 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
©2024 Book Brahma Private Limited.