ಪರಶುರಾಮನ ಸೃಷ್ಟಿ , ತುಳುನಾಡಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಿಶಿಷ್ಟ ಕಾವ್ಯಗಳಲ್ಲಿ “ಕೋಟಿ ಚೆನ್ನಯ ಪಾರ್ದನ ಸಂಪುಟ” ಕೂಡ ಒಂದು. ಇದು ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕ್ರತಿಯ ಅಸ್ತಿತ್ವವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ”ದಾಮೋದರ ಕಲ್ಮಾಡಿ” ಅವರು ತುಳುನಾಡಿನ ಮಹಾಕಾವ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಓದುಗರಿಗೆ ಇದರ ಮಾಹಿತಿಯನ್ನು ನೀಡಿದ್ದಾರೆ. ಕೋಟಿ ಚೆನ್ನಯ ಪಾರ್ದನ ಸಂಪುಟ ದಲ್ಲಿ ಈ ಮಹಾಕಾವ್ಯದ ಇತಿಹಾಸ, ಅದನ್ನು ಆಚರಿಸುವ ಬಗ್ಗೆ ಎಲ್ಲ ಮಾಹಿತಿಯು ದೊರಕ್ಕುತ್ತದೆ. ಓದುಗರಿಗೆ ಸರಳವಾಗಿ ,ಸ್ಪಷ್ಟವಾಗಿ ಅರ್ಥವಾಗುವಂತೆ ಮಾಡುವಲ್ಲಿ ಈ ಕೃತಿಯೂ ಪ್ರಮುಖ ಪಾತ್ರ ವಹಿಸಿದೆ.
©2025 Book Brahma Private Limited.