ಲೇಖಕಿ ಕೆ.ಆರ್. ಸಂಧ್ಯಾರೆಡ್ಡಿ ಅವರು ಬರೆದ ಕೃತಿ-ಮಹಿಳಾ ಜಾನಪದ. ನೈಸರ್ಗಿಕ ವಾಸ್ತವ ಮತ್ತು ಸಾಮಾಜಿಕ ಹೊಂದಾಣಿಕೆಯ ಮೂಲಕ ಸಹಜವೆಂಬಂತೆ ಸೃಷ್ಟಿಸುವ ಅವಳ ನಡವಳಿಕೆಗಳನ್ನು ನಿಜದ ಜಾನಪದವೆಂದು ಕಾಣಬಹುದು ಎನ್ನುವ ಲೇಖಕರು ಇದು ಹೆಣ್ಣು ಹೆಣ್ಣಿಗಾಗಿ ಮತ್ತು ಹೆಣ್ಣಿಗೋಸ್ಕರ ಸೃಷ್ಟಿಸಿಕೊಂಡ ಜಾನಪದ. ಎಂದರೆ, ಪ್ರತಿಯೊಂದ ಜೀವಿಯೂ ಸಾಂಸ್ಕೃತಿಕವಾಗಲು ಹಾತೊರೆಯುವ ಬಗೆ ಇದು. ಹೆಣ್ಣೇ ಕುಟುಂಬ ಮತ್ತು ಸಮಾಜದ ಅಧಿನಾಯಕಿ ಆಗಿದ್ದಾಗ ಇಂಥದೊಂದು ರೀತಿಯ ಜಾನಪದ ಇದ್ದಿರಬಹುದು ಎನ್ನುತ್ತಾರೆ ಅವರು. ಮಹಿಳಾ ಜಾನಪದ ಹುಟ್ಟಿನ ಕುರಿತು ಈ ಕೃತಿಯು ಚಿತ್ರಣ ನೀಡಿದೆ.
©2024 Book Brahma Private Limited.