ತುಳುನಾಡಿನವರಾದ ಬಿ.ಎ.ವಿವೇಕ ರೈ ಇವರು ತುಳು ವಿದ್ವಾಂಸರು. ಇವರಿಗೆ ಕಾರಂತರ ಪರಿಚಯ ಇದ್ದುದರಿಂದ ಭಾಷ, ಸಂಸ್ಕ್ರತಿ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಮುಖ್ಯವಾಗಿ ಜನಪದ ಅನ್ವಯಿಕ ಕಡೆಗೆ ಮತ್ತು ತನ್ನ ಸುತ್ತಲಿನ ಜನಪದರ ಏಳಿಗೆಗಾಗಿ ಶ್ರಮಿಸಬೇಕೆನ್ನುವ ಪ್ರೌಢ ಪ್ರಬಂಧಗಗಳ ಪುಸ್ತಕದ ಸಂಗ್ರಹವೇ ಅನ್ವಹಿಕ ಜಾನಪದ” ಎಂಬ ಈ ಕೃತಿ. ಈ ಕೃತಿಯು ಜಾನಪದದ ಸತ್ಯಗಳನ್ನು ಮುಕ್ತವಾಗಿ ಚರ್ಚೆಗೆ ಬಿಟ್ಟುಕೊಡುವಂತಹ ಲೇಖಕರನ್ನು ಮತ್ತಷ್ಟು ಜಾನಪದದ ಅಧ್ಯಯನ ಮಾಡಬೇಕೆಂಬುದನ್ನು ,ಜಾನಪದದ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡಬೇಕೆಂಬುದನ್ನು ಪ್ರೇರೆಪಿಸುತ್ತದೆ. ಜಾನಪದ ಸಾಹಿತ್ಯದ ಬಗ್ಗೆ 34 ವರ್ಷಗಳ ಕಾಲ ಅಧ್ಯಯನದಲ್ಲಿ ತೊಡಗಿಸಿಕೊಂಡವರು. ಜಾನಪದ ಸಾಹಿತ್ಯದ ಅಪಾರ ಗೌರವ ಹೊಂದಿರುವ ಇವರು ಜಾನಪದ ಸಾಹಿತ್ಯವು ವರ್ತಮಾನಗೊಳ್ಳ ಬೇಕೆಂಬ ಹಂಬಲವನ್ನು ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.