ಅನೇಕ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಕಾನೂನುಗಳ ಸಮಸ್ಯೆಗಳನ್ನು ಬಹುದೃಷ್ಟಿಕೋನಗಳಿಂದ ಈ ಕೃತಿಯಲ್ಲಿರುವ ಹಲವು ಲೇಖನಗಳಲ್ಲಿ ಚರ್ಚಿಸಲಾಗಿದೆ. ಕರ್ನಾಟಕದ ಅಲೆಮಾರಿ ಸಮುದಾಯಗಳ ಭವಿಷ್ಯದ ಕುರಿತ ಹೊಸ ಚಿಂತನೆಗಳು, ಅಲೆಮಾರಿ ಸಮುದಾಯಗಳ. ಸಂವಿಧಾನ ನಿರ್ಮಾಣದ ಮಾದರಿಯನ್ನು ಇಲ್ಲಿ ವಿವರಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಸಮಕಾಲೀನ ಸಮಾಜ ಮತ್ತು ಅಲೆಮಾರಿಗಳು; ಅಲೆಮಾರಿಗಳ ಅಧ್ಯಯನ ಸಮೀಕ್ಷೆ;ಅಲೆಮಾರಿಗಳ ಪಯಣದ ಹಿಂದಿನ ಭೌಗೋಳಿಕ ಪರಿಸರ ,ಅಲೆಮಾರಿಗಳ ಸಮಕಾಲೀನ ಸ್ಥಿತಿ-ಗತಿ; ಆರ್ಥಿಕ ಸ್ಥಿತ್ಯಂತರಗಳು; ಅಲೆಮಾರಿಗಳ ಸಾಂಸ್ಕೃತಿಕ ಲೋಕದೃಷ್ಟಿ ,ಅಲೆಮಾರಿಗಳ ಕಲಾ ಪರಂಪರೆ; ಕರಕುಶಲ ಪರಂಪರೆ; ಸಾಮಾಜಿಕ ಪರಂಪರೆ , ಅಲೆಮಾರಿ ಸಮುದಾಯ : ಸ್ಥಿರ.ಸಮುದಾಯ-ವಾಸ್ತವ ಮತ್ತು ವೈವಿಧ್ಯ.
©2024 Book Brahma Private Limited.