‘ತಾಯಿ ಮಕ್ಕಳ ದನಿಯು ತಾಳ ಬಾರಿಸಿದ್ಹಾಂಗ’ ಜಾನಪದ ತಜ್ಞ,ಲೇಖಕ ಕುರುವ ಬಸವರಾಜ್ ಅವರ ನಾಟಕ.ಈ ಕೃತಿಗೆ ನಾಡೋಜ, ಜಾನಪದ ತಜ್ಞ ಎಚ್.ಎಲ್. ನಾಗೇಗೌಡ ಅವರ ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಹಳ್ಳಿಯ ಬಾಳನ್ನು ಕಂಡುಂಡ ಕುರುವ ಬಸವರಾಜ್ ಗ್ರಾಮೀಣ ಭಾಷೆಯ ದನಿ-ಬನಿ, ಸೊಗಡು-ಸೊಗಸುಗಳನ್ನು ಅರಗಿಸಿಕೊಂಡು ರಚಿಸಿರುವ ಈ ಕಿರುನಾಟಕ ತುಂಬ ಚೆನ್ನಾಗಿದೆ. ಹಾಡು-ನೃತ್ಯಗಳ ರೂಪದಲ್ಲಿರುವ ಇದು ರಂಗದ ಮೇಲೆ ಇನ್ನೂ ಚೆನ್ನಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ ಎಚ್.ಎಲ್. ನಾಗೇಗೌಡ.
©2025 Book Brahma Private Limited.