‘ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು’ ಲೇಖಕ ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ರಚಿಸಿರುವ ನಾರಾಯಣ ಗುರುಗಳ ವೈಚಾರಿಕತೆ ಕುರಿತ ಕೃತಿ. ಈ ಕೃತಿಗೆ ಪ್ರಾಧ್ಯಾಪಕರಾದ ಶಿವ ಬಿಲ್ಲವ, ನಾಯ್ಕನಕಟ್ಟೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ ‘ನಾರಾಯಣ ಗುರುಗಳ ವೈಚಾರಿಕತೆ ಕುರಿತ ‘ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು" ಎಂಬ ಕೃತಿಯು ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ಅಲ್ಲದೇ ಭಾರತದ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಮರ್ಪಕ ಹೆಜ್ಜೆಯನ್ನಿಟ್ಟು ಅಲುಗಾಡಿಸಿದ ಅವರ ವೈಚಾರಿಕತೆಯ ಕುರುಹುಗಳು ಈ ಕೃತಿಯಲ್ಲಿವೆ ಎನ್ನುತ್ತಾರೆ. ಅಲ್ಲದೆ ಸಂವಿಧಾನದ ಉಲ್ಲೇಖಿಸಿದ ಜಾತಿ, ವರ್ಗ, ವರ್ಣರಹಿತ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರುಗಳು ನೂರು ವರ್ಷ ಹಿಂದೆಯೇ ಪ್ರಯತ್ನಪಟ್ಟಿದ್ದಾರೆ. ಹೀಗಾಗಿ ಭಾರತದ ಇತಿಹಾಸದಲ್ಲಿ ಅವರು ಯೋಗಿಯಾಗಿ, ಸಮಾಜ ಸುಧಾರಕರಾಗಿ ಕಾಣುವ ಮೊದಲೆನ್ನಬಹುದು ಎಂದಿದ್ದಾರೆ. ಜೊತೆಗೆ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ನಾರಾಯಣ ಗುರುಗಳು ತಳ ಸಮುದಾಯಗಳ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ. ಇಂತಹ ಸಮಾಜ ಸುಧಾರಕರ ಬಗ್ಗೆ ಡಾ. ಕೆ.ಪಿ ಮಹಾಲಿಂಗು ಕಲ್ಕುಂದರವರು ವಿಸ್ತೃುತ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಅವರ ಕೃತಿಯು ಜಾತಿಯ ಸೋಂಕಿನ ವಿರುದ್ಧ ಮತ್ತು ಸಮಾಜಮುಖಿ ಆಲೋಚನಾಪರ ಮುಖವನ್ನಿಟ್ಟು ರಚಿಸಿರುವುದು ಶ್ಲಾಘನೀಯ. ಈ ಕೃತಿಯ ಓದುಗರ ಮನಮುಟ್ಟುವಂತೆ ಮೂಡಿಬಂದಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.