ಲಾವಣಿಗಳು ಉತ್ತರ ಕರ್ನಾಟಕದ ಒಂದು ಜನಪ್ರಿಯ ಗೀತ ಪ್ರಕಾರ, ಈ ಶೃಂಗಾರ ರಸ ಪ್ರಧಾನವಾದ ಲಾವಣಿಗಳು 1900ರಲ್ಲಿ ಮರಾಠಿ ಲಾವಣಿಕಾರರ ಮೂಲಕ ನಾಡಿನಲ್ಲಿ ರಾಷ್ಟ್ರೀಯ ಭಾವನ ಮೊಳಗಿಸುವುದಕ್ಕೆ ಬಳಕೆಯಾದ ಬಗ್ಗೆ ಈ ಕೃತಿಯಲ್ಲಿ ಸಾಕಷ್ಟು ಮಾಹಿತಿಗಳಿದ್ದು ಲಾವಣಿಗಳು ಕರ್ನಾಟಕದಲ್ಲಿ ರಾಷ್ಟ್ರೀಯ ಭಾವನೆಗಳನ್ನು ಹುಟ್ಟುಹಾಕುವುದರ ಜತೆಗೆ ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ, ನೈತಿಕ ವಿಷಯಗಳ ಬಗೆಗೂ ಜನತೆಯನ್ನು. ಜಾಗೃತಗೊಳಿಸುವಲ್ಲಿ ವಹಿಸಿದ ಪಾತ್ರದ ಬಗ್ಗೆಯೂ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ’ಸ್ವಾತಂತ್ಯ್ರ ಹೋರಾಟ ಮತ್ತು ಲಾವಣಿ ಸಾಹಿತ್ಯ’ 2017 ರಲ್ಲಿ ಮರುಮುದ್ರಣಗೊಂಡಿದೆ. ಮೊದಲ ಮುದ್ರಣವು 1998ರಲ್ಲಿ ಕಂಡಿತ್ತು. ಜಗತ್ತಿಗೆ ಕನ್ನಡ ಸಾಹಿತ್ಯ ಹೇಳುವುದು ಸಾಕಷ್ಟಿದೆ. ಆ ಪೈಕಿ, ಲಾವಣಿ ಸಾಹಿತ್ಯವೂ ಒಂದು. ಭಾರತದ ಸ್ವಾತಂತ್ಯ್ರ ಹೋರಾಟದ ಸಂದರ್ಭದಲ್ಲಿ ಸಾಂಸ್ಖೃತಿಕವಾಗಿ ಲಾವಣಿ ಸಾಹಿತ್ಯ ನೀಡಿದ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ, ’ಸ್ವಾತಂತ್ರ್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ’ ಕೃತಿಯು ಮಹತ್ವ ಪಡೆಯುತ್ತದೆ.
©2024 Book Brahma Private Limited.