ಸೀಮಂತ ಪದಗಳು-Iಈ ಕೃತಿಯ ಕರ್ತೃ ಡಾ. ಶಕುಂತಲಾ ದುರಗಿ. ಕ್ಷೇತ್ರಕಾರ್ಯ ಮಾಡಿ ಸಂಪಾದಿಸಿದ ಕೃತಿ. ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಿಗೆ ಭೇಟಿ ನೀಡಿ, ಸಾಂಪ್ರದಾಯಿಕ ಹಾಡುಗಳನ್ನು ಸಂಗ್ರಹಿಸಿ, ಶಾಸ್ತ್ರೀಯ ಅಧ್ಯಯನ ಕೈಗೊಂಡಿದ್ದನ್ನು ಕೃತಿಯ ಉದ್ದಕ್ಕೂ ಕಾಣಬಹುದು. ಕೊನೆಗೆ ಅರ್ಥಪೂರ್ಣವಾದ ವ್ಯಾಖ್ಯಾನ ನೀಡಿರುವುದು ಅದರ ಮಹತ್ವ ಹೆಚ್ವಿಸಿದೆ.
ಒಟ್ಟು ವಿಷಯವನ್ನು ಐದು ಪ್ರಮುಖ ಭಾಗಗಳಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ, ತಾಯಿ ಗರ್ಭದಲ್ಲಿ ಭ್ರೂಣ ರೂಪುಗೊಳ್ಳುವ, ಬೆಳೆಯುವ ವಿವರಣೆಯ ಪದಗಳು, ಎರಡನೇ ಭಾಗದಲ್ಲಿ ಭ್ರೂಣದ ಬೆಳವಣಿಗೆಯ ಪರಿಣಾಮದಿಂದ ಗರ್ಭಸ್ಥ ಮಹಿಳೆಯಲ್ಲಾಗುವ ದೈಹಿಕ ಮತ್ತು ಮಾನಸಿಕ ನೋವು, ತಳಮಳ, ನಲಿವು ಇತ್ಯಾದಿ ಮೂರನೇ ಭಾಗದಲ್ಲಿ, ಗರ್ಭಣಿಯರಿಗೆ ಸಂಬಂಧಿಸಿದ, ಬಯಕೆಗಳು ಮತ್ತು ಆ ಬಯಕೆಗಳ ಪೂರೈಸುವ ಕುರಿತಾಗಿ ರಚನೆಯಾದ ರಂಜನೀಯ ಪದಗಳಿವೆ ಹಾಗೂ ಆಧುನಿಕ ಪೀಳಿಗೆಯ ಬಸುರಿ ಮಹಿಳೆಯ ಬಯಕೆಗಳ ಕುರಿತು ಪದಗಳಿವೆ. ನಲ್ಲೇರೈವರು ಆರತಿ ಬೆಳಗ್ಯಾರು, ತೇರಿನ ಆರತಿ ಸ್ಥಿರವಾಗಲಿ, ಜಯ ಮಂಗಲ ನಿತ್ಯ ಶುಭ ಮಂಗಲ, ಮಂಗಳಾರತಿ ಬೆಳಗುವೆನಮ್ಮ, ಹೀಗೆ ನಾಲ್ಕನೇ ಭಾಗದಲ್ಲಿ ನಾಲ್ಕು ಆರತಿ ಪದಗಳಿವೆ. ಅಂತ್ಯದ ಐದನೇ ಭಾಗದಲ್ಲಿ ಅನುಬಂಧವಿದೆ. ಜಾನಪದೀಯ ಶಾಸ್ತ್ರೀಯ ಅಧ್ಯಯನಕ್ಕೆ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.
©2024 Book Brahma Private Limited.