ಕುರುಬರ ಹೇಳಿಕೆಗಳು

Author : ಎಂ. ಎಂ. ಪಡಶೆಟ್ಟಿ

Pages 70

₹ 80.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕೃಷಿಯಿಂದ ಪಶುಪಾಲನೆ ಹೊರತಲ್ಲ. ಗೋವು-ಕುರಿಪಾಲನೆ ಸಹಜ. ಮಳೆ-ಬೆಳೆಗೆ ಸಂಬಂಧಿಸಿದಂತೆ ಕೃಷಿಕರಲ್ಲಿ ನಂಬಿಕೆಗಳು ಸಾಮಾನ್ಯ. ಕೃಷಿಕರಂತೆ ನಿಸರ್ಗ ಜ್ಞಾನದಿಂದ ಹೇಳುತ್ತಾ ಬಂದ ಕುರುಬರ ಮಾತುಗಳು -ತಿಳಿವಳಿಕೆಗಳು ಇಂದಿಗೂ ಅಧ್ಯಯನದ ವಸ್ತುಗಳಾಗುತ್ತಿವೆ. ಆದರೆ, ಈ ನಂಬಿಕೆಗಳು ದೈವಿ ನೆಲೆಯಲ್ಲಿವೆ ಎಂಬ ಕಾರಣಕ್ಕೆ ಅವುಗಳನ್ನು ಅಲಕ್ಷಿಸುವುದು ಸೂಕ್ತವಲ್ಲ. ಬದುಕಿನ ಬಹುತೇಕ ಕಷ್ಟ-ಕಾರ್ಪಣ್ಯಗಳಿಗೆ ಈ ನಂಬಿಕೆ ಅಥವಾ ಹೇಳಿಕೆಗಳು ಪರಿಹಾರವಾಗಿರುತ್ತವೆ ಎಂಬ ಅವರ ಬದುಕಿನ ಸಮರ್ಥನೆಯನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ, ’ಕುರುಬರ ಹೇಳಿಕೆಗಳು’ ಕೃತಿ ಹೊಸ ಹೊಳವುಗಳನ್ನು ನೀಡುತ್ತದೆ.

About the Author

ಎಂ. ಎಂ. ಪಡಶೆಟ್ಟಿ

ಎಂ. ಎಂ. ಪಡಶೆಟ್ಟಿ ಅವರು ಮಲ್ಲಪ್ಪ ಪಡಶೆಟ್ಟಿ ಮತ್ತು ಅಯ್ಯಮ್ಮ ಮಲ್ಲಪ್ಪ ಪಡಶೆಟ್ಟಿ ಅವರ ಮಗನಾಗಿ 01-06-1949 ರಂದು ಅಸ್ಕಿ ಗ್ರಾಮದ ಸಿಂದಗಿ ತಾಲ್ಲೂಕಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಅಸ್ಕಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕಲಕೇರಿಯಲ್ಲಿ, ಕಾಲೇಜು ಶಿಕ್ಷಣವನ್ನು ವಿಜಯಪುರದಲ್ಲಿ ಪಡೆದರು. 1974 ರಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಜಿ.ಪಿ ಪೋರವಾಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ ಅಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು.  1991 ರಲ್ಲಿ ತಿಂಥಿಣಿ ಮೋನಪ್ಪಯ್ಯ – ಒಂದು ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ...

READ MORE

Related Books