ಜಾನಪದ ಕಥನ ಲೇಖಕ ಎಚ್. ಟಿ. ಪೋತೆ ಅವರ ಕೃತಿ. ಈ ಕಥನವು (ಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು) ಪ್ರಧಾನವಾಗಿ ಇದು ಕಲಾಕಥನ. ಮಾರ್ಗ ಸಂಸ್ಕೃತಿಯ ಆಟಾಟೋಪದಲ್ಲಿ ದೇಶಿ ಸಂಸ್ಕೃತಿ ನಲುಗಿದೆ, ನಲುಗುತ್ತಿದೆ. ದಲಿತ-ಶೋಷಿತವೆಂಬ ದುಡಿಯುವ ವರ್ಗದ ಸಾಂಸ್ಕೃತಿಕ ಬದುಕು ಜಾನಪದ ಕಥನವೆಂಬ ಕಲಾಭಿತ್ತಿಯಲ್ಲಿ ಅಕ್ಷರರೂಪವನ್ನು ಪಡೆದಿದೆ. ನೈಜಕಲೆಗೆ ಯಾರೋ ಆರೋಪಿಸಿದ ಅಸ್ಪೃಶ್ಯತೆಯಿಂದಾಗಿ ಕೀಳು ಕುಲದವರ ಕತೆಗಳಾಗಿವೆ. ಅವು ಬಹುಸಂಖ್ಯಾತ ಸಮುದಾಯದ ಬದುಕಿನೊಂದಿಗೆ ನಂಟು ಬೆಳೆಸಿಕೊಂಡು ಬಂದಿರುವ ಯಾತನೆಯ ಕಥೆಗಳಾಗಿವೆ. ಇಂಥ ಸಾವಿರಾರು ಕಥೆಗಳಿಗೆ ಅಕ್ಷರ ರೂಪ ನೀಡಿದ್ದೇ ಈ ಕೃತಿ.
©2024 Book Brahma Private Limited.