‘ಮುಡಿಯಲಿಲ್ಲೇಳೆ ಹೂವ’ ಎನ್ನುವುದು ದೀವರ ಸಂಸ್ಕೃತಿಯ ಒಂದು ಭಾಗವಾದ ಬೀಸುವ ಹಾಡುಗಳ ಕೆಲವು ತ್ರಿಪದಿಗಳಲ್ಲಿ ಪುನರಾವರ್ತನೆಯಾಗುವ ಕೊನೆಯ ಮಾತು. ಅದನ್ನೇ ಪುಸ್ತಕದ ಶೀರ್ಷಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ.
ಸುಮಾರು ಮೂವತ್ತು ವರ್ಷಗಳಿಂದ ಎನ್. ಹುಚ್ಚಪ್ಪ ಮಾಸ್ತರ್ , ಕೆ.ಹೆಚ್. ಶಿವಕುಮಾರ್ ಹಾಗೂ ಕೆ. ಹೆಚ್. ಜಯರಾಮ್ ಅವರು ಸಂಗ್ರಹಿಸಿದ ದೀವರು ಎಂಬ ಸಮುದಾಯದ ಬೀಸುವ ಹಾಡುಗಳು, ಬತ್ತ ಕುಟ್ಟುವ ಕಥನ ಹಾಡುಗಳು, ಸಂಪ್ರದಾಯದ ಹಾಡುಗಳು, ಜನಪದ ನಂಬಿಕೆಗಳು, ಒಗಟುಗಳು, ಗಾದೆಗಳು, ಮತ್ತು ಕಥೆಗಳ ಸಂಗ್ರಹ ಈ ಪುಸ್ತಕದಲ್ಲಿದೆ.
ಒಂದು ಸಾವಿರ ವರ್ಷಗಳ ಇತಿಹಾಸವಿರುವ ದೀವರು ಸಂಸ್ಕೃತಿ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವ ಭರಾಟೆಯಿಂದ , ಸಂಸ್ಕೃತಿಯಲ್ಲಿ ಉಳಿದುಕೊಂಡ ಪಳಯುಳಿಕೆಗಳನ್ನು ಇಲ್ಲಿ ಸಂಗ್ರಹಿಸಿ ಈ ಪುಸ್ತಕ ರೂಪದಲ್ಲಿ ಹೊರತರಲಾಗಿದೆ.
©2024 Book Brahma Private Limited.