‘ಜನಪದ ಕಲೆ ಸಂಸ್ಕೃತಿ ’ ಕೃತಿಯು ಎಚ್.ಟಿ ಪೋತೆ ಅವರ ಜನಪದ ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಕೃತಿಯಾಗಿದೆ. ಮಾನವ ಸಂಸ್ಕೃತಿಯನ್ನು ಅರಿಯುವ ಸಾಧನಗಳಲ್ಲಿ ಜಾನಪದವು ಪ್ರಮುಖವಾದುದು. ಇದು ಸಂಸ್ಕೃತಿಯ ಒಳ ಪದರುಗಳನ್ನು ಬಿಡಿಸಿ ಮಾನವನ ಬದುಕು- ಬಾಳಿನ ಹಿನ್ನೆಲೆಯನ್ನು ಮತ್ತು ರೀತಿ-ನೀತಿಗಳನ್ನು ಹಾಗೂ ಅವನ ಅಭಿವ್ಯಕ್ತಿ ವಿಧಾನಗಳನ್ನು ತೆರೆದಿಡುತ್ತದೆ. ಇದು ಆಧುನಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವಂಥದ್ದಾಗಿದೆ. ಸಮಾಜ-ಸಾಹಿತ್ಯ-ಸಂಸ್ಕೃತಿ ಇವು ಒಂದಕ್ಕೊಂದು, ಸಂಬಂಧ ಹೊಂದಿದ್ದು ಪರಸ್ಪರ ಅಗಲಿ ಬದುಕಲಾರವು, ಬೆಳೆಯ ಲಾರವು. ಇದು ಕಾಲಾತೀತ ಸತ್ಯ. ಇಂತಹ ಅರಿಯುವ, ಬದುಕುವ ಬೆಳೆಯುವ ಹಿನ್ನೆಲೆಯಿಂದ ಜನಪದ ಸಂಶೋಧನೆ ನಡೆಯಬೇಕು, 'ಡಾ ಎಚ್. ಟಿ. ಪೋತೆ ಯವರ' ಜನಪದ ಕಲೆ ಸಂಸ್ಕೃತಿ' ಕೃತಿ ಈ ಹಿನ್ನೆಲೆಯಿಂದ ಪ್ರಮುಖವೆನಿಸುತ್ತದೆ. ಆಧುನಿಕತೆಯ ಒಡೆತನಕ್ಕೆ ಸಿಕ್ಕಿ ಯಂತ್ರಗಳ ಯಾಜಮಾನ್ಯದಿಂದ ನಶಿಸುತ್ತಿರುವ ಜನಪದ ಸಾಹಿತ್ಯ ಹಾಗೂ ಕಲಾಪ್ರಕಾರಗಳನ್ನು ಲೋಕ ದೃಷ್ಟಿಯಿಂದ ಗಮನಿಸ ಬೇಕಾದ ಅಗತ್ಯವನ್ನು ಈ ಕೃತಿ ಮನಗಾಣಿಸುತ್ತದೆ.
©2024 Book Brahma Private Limited.