ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರು ಡಾ. ಜಿ.ಶಂ. ಪರಮಶಿವಯ್ಯ. ಜನಪದ ಸಾಹಿತ್ಯ ದಾಖಲು ಮಾಡುವುದರಿಂದ ಹಿಡಿದು ಮೈಸೂರು ವಿವಿಯಲ್ಲಿ ಜನಪದ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಸ್ಥಾಪನೆಯವರೆಗೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ದಕ್ಷಿಣ ಕರ್ನಾಟಕದ ಜನಪದ ಅವರ ಆಸಕ್ತಿಯ ಕ್ಷೇತ್ರ. ಮಂಟೇಸ್ವಾಮಿ ನೀಲಗಾರರು, ಮೈಲಾರ ಗೊರವರು, ದೊಂಬಿದಾಸರು, ಕಿನ್ನರಿ ಜೋಗಿಗಳು. ಮೂಡಲಪಾಯ ಮುಂತಾದ ಜನಪದ ಪ್ರಕಾರಗಳ ಬಗ್ಗೆ ಅಧ್ಯಯನ ಮಾಡಿರುವ ಅವರು ಪ್ರಸ್ತುತ ಕೃತಿಯಲ್ಲಿ ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳನ್ನು ಕೇಂದ್ರೀಕರಿಸಿದ್ದಾರೆ.
ಹಿರಿಯ ಸಾಹಿತಿ, ವಿದ್ವಾಂಸ ದೇ ಜವರೇಗೌಡರು ಜಿಶಂಪ ಅವರ ಸೇವೆಯನ್ನು ನೆನೆಯುತ್ತಾ ’ಜಾನಪದ ಕ್ಷೇತ್ರದಲ್ಲಿ ಜೀಶಂಪ ಅವರಿಗೆ ಸರಿಗಟ್ಟುವ ವ್ಯಕ್ತಿಗಳು ಇಂಡಿಯಾ ದೇಶದಲ್ಲಿಯೇ ವಿರಳ. ಆ ಕ್ಷೇತ್ರದ ಎಲ್ಲ ಮುಖಗಳೂ ಮೂಲೆ ಮುಡುಕುಗಳೂ ಅವರಿಗೆ ಸುಪರಿಚಿತ. ಅದು ಅವರಿಗೆ ಉಸಿರಾಗಿತ್ತು. ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿತ್ತು. 'ಪರಮ ಪತಿವ್ರತೆಗೆ ಗಂಡನೊಬ್ಬ' ಎನ್ನುವ ರೀತಿಯಲ್ಲಿ ಅವರು ಅದಕ್ಕೆ ಗಂಟು ಹಾಕಿಕೊಂಡಿದ್ದರು. ಅವರು ಕನ್ನಡ ನಾಡಿನ ಶ್ರೇಷ್ಠ ವಾಗ್ನಿಗಳಲ್ಲೊಬ್ಬರು. ಆದರು ಮಾತಿಗೆ ನಿಂತರೆಂದರೆ ಸಂಗೀತದೋಪಾದಿಯಲ್ಲಿ ವಾಸ್ಪದಾಹ ಪ್ರವಹಿಸುತ್ತಿತ್ತು. ನಿರರ್ಗಳತೆ, ಮೋಹಕತೆ, ಅರ್ಥಭಾವ ಸೌಂದರ್ಯ ಅದರ ವಾಗಿತೆಯ ಲಕ್ಷಣ. ಸಮರ್ಪಣ ಮನೋಭಾವದಿಂದ, ಅವಿರತ ಶ್ರಮದಿಂದ, ದೃಢಮಠದಿಂದ, ಮಾರ್ಗದರ್ಶಕರಾಗಿ ಬಾಳಿದರು, ಬಾಳಿ ಬೆಳಗಿದರು’ ಎಂದಿದ್ದಾರೆ.
ಜನಪದ ತಜ್ಞ ಡಾ. ಚಕ್ಕೆರೆ ಶಿವಶಂಕರ್, ಕರ್ನಾಟಕ ಜಾನಪದ ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಬಗ್ಗೆ ಎಚ್ಚರ ಮೂಡಿಸಿದವರು ಜೀ. ಶಂ. ಪರಮಶಿವಯ್ಯನವರು. 1950ರ ಸುಮಾರಿಗೆ ಜಾನಪದ ಕ್ಷೇತ್ರವನ್ನು ಪ್ರವೇಶಮಾಡಿದ ಜೀಶಂಪ ಅದರಿಂದ ಕರ್ನಾಟಕ ಜಾನಪದಕ್ಕೆ ಆಳ ವೈಶಾಲ್ಯಗಳು ಸಿದ್ಧಿಸಿದವು ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಅದುವರೆಗೂ ಅಜ್ಞಾತವಾಗಿದ್ದ ವೃತ್ತಿಗಾಯಕ ಪರಂಪರೆಗಳನ್ನು ಶೋಧಿಸಿ ಬೆಳಕಿಗೆ ತಂದು, ಅನೇಕಾನೇಕ ಜನಪದ ಕಾವ್ಯ, ಖಂಡಕಾವ್ಯ, ಮಹಾಕಾವ್ಯಗಳನ್ನು ಪ್ರಕಟಿಸಿದರು. ಜಾನಪದ ಅಧ್ಯಯನಕ್ಕೆ ಅಕಾಡೆಮಿಕ್ ಸ್ವರೂಪವನ್ನು ತಂದುಕೊಟ್ಟುದಲ್ಲದೆ ಅಂತರರಾಷ್ಟ್ರೀಯ ಮನ್ನಣೆಯನ್ನು ದೊರಕಿಸಿಕೊಟ್ಟರು. ತಮ್ಮ ಮಾರ್ಗದರ್ಶನದಲ್ಲಿ ಜಾನಪದಕ್ಕಾಗಿ | ದುಡಿಯುವ ಯುವ ವಿದ್ವಾಂಸರ ಪಡೆಯನ್ನೇ ನಿರ್ಮಾಣ ಮಾಡಿದರು’ ಎಂದು ಕೃತಿಯಲ್ಲಿ ಸ್ಮರಿಸಿದ್ದಾರೆ.
©2024 Book Brahma Private Limited.