ತುಳು ಭಾಷೆಯಲ್ಲಿ ಪ್ರಾಥಮಿಕವಾಗಿ ಆಯಾ ಪ್ರಾದೇಶಿಕ ದೈವಗಳು ಭೂತಾರಾಧನೆಯ ಸಂದರ್ಭದಲ್ಲಿ ಭೂತ ಮಾಧ್ಯಮದ ಬಳಗದವನೊಬ್ಬ ಚಿಕ್ಕ ಚರ್ಮವಾದ್ಯ ನುಡಿಸುತ್ತಾ, ಭೂತದ ಹುಟ್ಟು, ಸಾಹಸ, ಪ್ರತಾಪ, ಸಂಚಾರಗಳನ್ನು ಅಡಕವಾಗಿ ಹಾಡಿನ ರೂಪದಲ್ಲಿ ನಿರೂಪಿಸುವುದನ್ನೆ ಪಾಡ್ದನ ಎನ್ನುತ್ತಾರೆ. ಆದರೆ ಇದಿಷ್ಟೇ ಪಾಡ್ದನದ ಪೂರ್ಣ ವ್ಯಾಪ್ತಿ ಕಟ್ಟಿಕೊಡುವುದಿಲ್ಲ. ಪ್ರಾರ್ಥನೆಗೆ ಸೀಮಿತವಾಗದೆ ಜಾನಪದ ಕಥಾನಕಗಳ ನಿರೂಪಣೆಗೂ ಇವು ಬಳಕೆಯಾದದ್ದುಂಟು. ಈ ಎಲ್ಲಾ ನಿಟ್ಟಿನಿಂದ ತುಳುವಿನ ಸಾಂಸ್ಕೃತಿಕ ಅಧ್ಯಯನದ ಭಾಗವಾಗಿ ಲೇಖಕ ಪ್ರೊ. ಎ.ವಿ.ನಾವಡರು ತಮ್ಮ ಈ ಅಧ್ಯಯನ ಪೂರ್ಣ ಕೃತಿಯನ್ನು ಓದುಗರ ಕೈಗಿತ್ತಿದ್ದಾರೆ.
©2024 Book Brahma Private Limited.