ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಸಂಶೋಧನಾ ಲೇಖನಗಳ ಕೃತಿ-ಲೋಕ ಜಾನಪದ. ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲನೇ ಭಾಗದಲ್ಲಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ವಿಮರ್ಶಾ ಲೇಖನಗಳು, ಎರಡನೇ ಭಾಗದಲ್ಲಿ ತತ್ವಪದ ಸಾಹಿತ್ಯಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳಿವೆ. ಜಾನಪದ ಮತ್ತು ತತ್ವಪದ ಎರಡು ಕ್ಷೇತ್ರಗಳಲ್ಲಿ ಅಧ್ಯಯನಪೂರ್ಣತೆಯನ್ನು ಕಾಣಬಹುದು. ಜಾನಪದವನ್ನು ಸ್ತ್ರೀವಾದಿ ನೆಲೆಯಲ್ಲಿ ನೋಡುವ ಪ್ರಯತ್ನ ಮೊದಲ ಭಾಗದಲ್ಲಿ ಕಾಣಿಸುತ್ತದೆ. ಜನಪದ ಮಾತೃ ದೈವಗಳು ಕುರಿತ ಬರೆದ ಬರಹ ಸಂಶೋಧನಾತ್ಮಕವಾಗಿದೆ. ಜಾನಪದ ಹಾಡುಗಳಲ್ಲಿ ಬರುವ ಅಧ್ಯಾತ್ಮ ಪರಿಕಲ್ಪನೆಯ ಬರಹವೂ ಇಲ್ಲಿದೆ. ಎರಡನೇ ಭಾಗದಲ್ಲಿ, ಹೈದರಾಬಾದ್ ಕರ್ನಾಟಕದ ತತ್ವಪದಕಾರರ ಕುರಿತ ಸಂಶೋಧನಾ ಬರಹಗಳಿವೆ. ಜಾನಪದ ಸಾಹಿತ್ಯವನ್ನು ಹೊಸ ದೃಷ್ಟಿಕೋನದೊಂದಿಗೆ ನೋಡಿದ್ದು ಬರಹಗಳ ವೈಶಿಷ್ಟ್ಯ.
©2024 Book Brahma Private Limited.