ಅಗ್ರಹಾರ ಕೃಷ್ಣ ಮೂರ್ತಿಯವರ ಪ್ರಕಾರ ಜಾನಪದ ಸಂಪ್ರದಾಯಗಳಲ್ಲಿ ಪೂಜೆಯೂ ಒಂದು ಪ್ರಮುಖ ಅಂಶ. ಲೇಖಕರು ಬೆಳ್ದಿಂಗಳಪ್ಪನ ಪೂಜೆ ಕುರಿತು ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಜನಪದ ಸಂಸ್ಕೃತಿಯ ಭಾಗವಾಗಿರುವ ಬೆಳ್ದಿಂಗಳಪ್ಪನ ಪೂಜೆಯ ಸಂಪ್ರದಾಯ, ಸಾಂಸ್ಕ್ರತಿಕ ವಿಷಯಗಳನ್ನು ಈ ಕೃತಿಯು ಪರಿಚಯಿಸುತ್ತದೆ. ಬೆಳ್ದಿಂಗಳಪ್ಪನ ಪೂಜೆ ಯಾವಾಗ, ಎಲ್ಲಿ ಯಾವ ಸಮಯದಲ್ಲಿ , ಹೇಗೆ ಹುಟ್ಟಿಕೊಂಡಿದ್ದು ,ಅದರ ಆರಂಭ , ಪೂಜೆಯ ಒಟ್ಟು ಸಾಂಕೇತಿಕತೆ ಈ ಎಲ್ಲ ಸಂಗತಿಗಳನ್ನು ಲೇಖಕರು ಈ ಪುಸ್ತಕದಲ್ಲಿ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.