ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಜಾನಪದೀಯ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಿ ರಚಿಸಲಾಗಿರುವ ಕೃತಿ ‘ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ’. ಲೇಖಕಿ ಮುಮ್ತಾಜ್ ಬೇಗಾಂ ಅವರು ಬರೆಯುತ್ತಾ ‘ಮನುಷ್ಯ ಬದುಕು ಹೇಗಿರಬೇಕು ಎಂಬ ನಿದರ್ಶನಗಳನ್ನು ತಮ್ಮ ಅನುಭವದ ನುಡಿಗಳಲ್ಲಿ ಕಟ್ಟಿಕೊಟ್ಟವರು ಜನಪದರು. ಬದುಕಿನ ರೀತಿ, ನೀತಿ, ನಡವಳಿಕೆ, ಆದರ್ಶ ಪಾಲನೆ, ಮೌಲ್ಯಗಳ ಅಳವಡಿಸಿಕೊಳ್ಳುವಿಕೆ ಹೀಗೆ ಬದುಕಿಗೆ ಬೇಕಾದ ಪಾಠಗಳನ್ನು ಜನಪದರು ಜನಪದ ಸಾಹಿತ್ಯ ಕಟ್ಟುವ ಮೂಲಕ ತಿಳಿಯಪಡಿಸಿದ್ದಾರೆ. ವ್ಯಕ್ತಿತ್ವ ವಿಕಸನದಂತಹ ಶಿಬಿರಗಳಿಗೆ ಹೋಗುವ ಇಂದಿನ ವರ್ತಮಾನದಲ್ಲಿ ಬಹು ಹಿಂದೆಯೇ ಜನಪದರು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅಂಶಗಳನ್ನು ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ನಮ್ಮ ನಡೆ, ನುಡಿ, ಊಟ ಉಪಚಾರ, ಆಚಾರ, ವಿಚಾರ, ನಡೆಯುವ, ನೋಡುವ, ಮಾತನಾಡುವ ಕ್ರಿಯೆಗಳ ಬಗೆಗೆ ತಮ್ಮದೇ ಅನುಭವವನ್ನು ವ್ಯಕ್ತಿತ್ವ ವಿಕಸನದ ಅಮೃತವನ್ನು ಕಟ್ಟಿಕೊಟ್ಟಿದ್ದಾರೆ’ ಎಂದಿದ್ದಾರೆ. ಪ್ರಸ್ತುತ ಕೃತಿಯು ಜಾನಪದೀಯ ಮೌಲ್ಯಗಳ ಕುರಿತು ಸಮಗ್ರ ಅಧ್ಯಯನ ನಡೆಸಿರುವ ಮಹತ್ವದ ಕೃತಿಯಾಗಿದೆ.
©2024 Book Brahma Private Limited.