ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ತವಕದಲ್ಲಿ ಹಳೆತಲೆಮಾರಿನ ಚಿಂತನೆಗಳನ್ನು ದೂರಸರಿಸಲಾಗುತ್ತಿದೆ. ಏನೇ ಆದರೂ ಊರು ಕಟ್ಟಿದವರು ನಮ್ಮ ಜನಪದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲೇಬೇಕು. ಜನಪದ ಆರಾಧನಾ ಕಲೆಗಳು, ಪ್ರದರ್ಶನ ಕಲೆಗಳು, ವೃತ್ತಿ ನಿರತ ಕಲೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಸಂಕ್ರಮಣ ದಿನದಲ್ಲಿಯೂ ಜನಪದ ಸಂವೇದನೆಯುಳ್ಳ ಅನೇಕ ವಿದ್ವಾಂಸರು ಅದರ ಮಹತ್ವ ತಿಳಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಲೇಖಕರಾದ ಡಾ.ವೆಂಕೋಬರಾವ್ ಎಂ. ಹೊಸಕೋಟೆ ಯವರು ಜನಪದ ಸಾಹಿತ್ಯದ ಮಹತ್ವವನ್ನು ಅರಿತವರಾಗಿದ್ದು ತಮ್ಮ ಬರವಣಿಗೆಯ ಮೂಲಕ ಜನಪದ ಉಳಿಸುವ ಚಳುವಳಿ ಕೈಗೊಂಡಿದ್ದಾರೆ. ಈ ಪುಸ್ತಕ ಜನಪದ ಸಾಹಿತ್ಯದ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತದೆ.
©2025 Book Brahma Private Limited.