ಹೊಂಬಾಳೆ-ಜಾನಪದ ಸಂಶೋಧನ ಲೇಖನಗಳ ಸಂಗ್ರಹ ಕೃತಿ. ಡಾ. ಎ.ಎನ್. ಸಿದ್ದೇಶ್ವರಿ ಅವರು ಬರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಕ್ಷೇತ್ರ ಅಧ್ಯಯನದಮೂಲಕ ನಿರೂಪಿಸಲಾಗಿದೆ.
ದೇವದಾಸಿ ಪದ್ದತಿ, ಜನಪದ ಆಚರಣೆಗಳಲ್ಲಿ ಚಿತ್ರಕಲೆ, ಮಧ್ಯಾಹ್ನ ಮಾರಮ್ಮ:ಸ್ತ್ರೀ ಸಂವೇದನೆ, ಜನಪದ ಹಾಡುಗಳಲ್ಲಿ ದಾಂಪತ್ಯ, ಬಳ್ಳಾರಿ ಪರಿಸರದಲ್ಲಿ ಹೆಣ್ಣು ನೋಡುವ ಸಂಪ್ರದಾಯ, ಅಕ್ಕನ ವಚನಗಳಲ್ಲಿರುವ ಸ್ತ್ರೀ ಸಂವೇದನೆ, ದೊಡ್ಡಗೌರಿ ಹುಣ್ಣಿಮೆ, ವಚನಗಳಲ್ಲಿ ಕುಟುಂಬ ಪರಿಕಲ್ಪನೆ, ಬಳ್ಳಾರಿ ಜಿಲ್ಲೆಯ ಜನಪದ ರಂಗಭೂಮಿಗೆ ಮಹಿಳೆಯರ ಕೊಡುಗೆ -ಈ ಎಲ್ಲ ವಿಷಯ ಗಳನ್ನು ವಿಶ್ಲೇಷಿಸಲಾಗಿದೆ.
ಹಂಪಿಯ ಕನ್ನಡ ವಿ.ವಿ. ಹಸ್ತಪ್ರತಿ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಅವರು ಬರೆದ ಮುನ್ನುಡಿಯಲ್ಲಿ ‘ಸಾಮಾಜಿಕ-ಕೌಟುಂಬಿಕ ಹಾಗೂ ಸಂಸ್ಕೃತಿಯ ಅನನ್ಯತೆಯ ಭಾಗವಾಗಿ ಇಲ್ಲಿಯ ಜನಪದೀಯ ಆಚರಣೆಗಳು ಹಾಗೂ ಅವುಗಳ ಮಹತ್ವವನ್ನು ಲೇಖಕರು ಗುರುತಿಸಿದ್ದಾರೆ. ಸಾಂಪ್ರದಾಯಿಕವಾಗಿ ಹುಟ್ಟಿಕೊಂಡ ಜಾನಪದೀಯ ಪ್ರತಿ ಆಚರಣೆಯು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿದ್ದವೆ? ಇಲ್ಲವೇ? ಎಂಬುದನ್ನುಸಂಶೋಧನಾತ್ಮಕವಾಗಿ ವಿಶ್ಲೇಷಿಸಿದ ಒಳನೋಟ, ಪ್ರತಿ ಅಧ್ಯಾಯದಲ್ಲಿ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.