‘ಜನಪ್ರಿಯ ಗಾದೆಗಳು’ ರಾಜೇಶ್ವರಿ ಜಯಕೃಷ್ಣ ಅವರ ಕೃತಿಯಾಗಿದೆ. ನನ್ನ 'ಜನಜನಿತ ಗಾದೆಗಳು' ಮೊದಲ ಭಾಗ ಪ್ರಕಟಗೊಂಡಿದ್ದು 2005ರಲ್ಲಿ. ಮರುವರ್ಷವೇ ಅದು ಮರುಮುದ್ರಣವನ್ನು ಕಂಡಿತ್ತು. ಇದುವರೆಗೂ ಆ ಕೃತಿಯು ಹದಿಮೂರು ಮುದ್ರಣಗಳನ್ನು ಕಂಡಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆಗೆ ಉಪಯುಕ್ತವಾದ ಈ ಕೃತಿಗೆ ಹೆಚ್ಚಿನ ಬೇಡಿಕೆ ಬಂದಿರುವುದು ನಿಜಕ್ಕೂ ಖುಷಿ ನೀಡುವಂಥ ವಿಚಾರ. “ಪ್ರಬಂಧ ಬರೆಯುವಲ್ಲಿ, ಭಾಷಣ ಮಾಡುವಲ್ಲಿ, ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ಈ ಪುಸ್ತಕವು ನಮಗೆ ಬಹಳಷ್ಟು ನೆರವಾಗಿದೆ.” ಎಂದು ಕೆಲವು ಮಕ್ಕಳು ನನ್ನಲ್ಲಿ ಹೇಳಿಕೊಂಡದ್ದುಂಟು. ಶಿಕ್ಷಕರೂ ಈ ಪುಸ್ತಕವನ್ನು ಮೆಚ್ಚಿಕೊಂಡದ್ದುಂಟು. ಇದರ ಮುಂದುವರಿದ ಭಾಗವನ್ನು ಹೊರತರಬಾರದೇಕೆ ಎಂದು ಅನೇಕರು ನನ್ನಲ್ಲಿ ಕೇಳಿದ್ದರು. ಅವರ ಕೋರಿಕೆಯನ್ನು ಪರಿಗಣಿಸಿ ಜನಜನಿತ ಗಾದೆಗಳು ಪುಸ್ತಕದ ಮುಂದುವರಿದ ಹೆಚ್ಚುವರಿ ಗಾದೆಗಳನ್ನು 'ಜನಪ್ರಿಯ ಗಾದೆಗಳು, ಎಂಬ ಈ ಪುಸ್ತಕದ ಮೂಲಕ ನಿಮ್ಮ ಮುಂದೆ ಇಟ್ಟಿರುವೆ. ಎಂದಿನಂತೆ ಗಾದೆಗಳ ಪ್ರಾಮುಖ್ಯತೆಯನ್ನು ಅನುಸರಿಸಿ, ಸರಳ ಭಾಷೆಯ ಮೂಲಕ, ಸರಳ ಉದಾಹರಣೆಗಳ ಮೂಲಕ ಸಾದರಪಡಿಸಿದ್ದೇನೆ. ನಲವತ್ತಕ್ಕೂ ಹೆಚ್ಚಿನ ಗಾದೆಗಳ ವಿವರಣೆ ಇದರಲ್ಲಿದೆ.
©2024 Book Brahma Private Limited.