‘ಕರ್ನಾಟಕದ ಜನಪದ ಆಟಗಳು’ ಲೇಖಕಿ ರೇಣುಕಾ ಕೋಡಗುಂಟಿ ಅವರ ಸಂಪಾದಿತ ಕೃತಿ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಜನಪದ ಆಟಗಳು ವೈವಿಧ್ಯಮಯವಾಗಿವೆ, ಬದುಕಿನ ಭಾಗವಾಗಿ ಈ ಆಟಗಳು ಹಲವಾರು ವರ್ಷಗಳಿಂದ ಜನತೆಯ ಬದುಕನ್ನು ಮುನ್ನಡೆಸಿಕೊಂಡು ಬರುವುದಕ್ಕೆ ಸಹಾಯ ಮಾಡಿವೆ. ಜನಪದ ಆಟಗಳಲ್ಲಿ ಕೆಲವು ಸಾವಿರ ವರ್ಷಗಳಿಂದ ಮುಂದುವರೆದುಕೊಂಡು ಬಂದಿವೆ, ಇನ್ನು ಕೆಲವು ವಿಭಿನ್ನ ಕಾಲಗಳಲ್ಲಿ ಬೆಳೆದುಕೊಂಡು ಬಂದಂತವುಗಳಾಗಿವೆ. ಆಟಗಳು ಮೂಲಭೂತವಾಗಿ ಮನೋರಂಜಕವಾಗಿ, ಸಮಯ ಕಳೆಯುವುದಕ್ಕಾಗಿ ಹುಟ್ಟಿದವು ಇವೆ. ಅವುಗಳೊಂದಿಗೆ ಪ್ರಾಕೃತಿಕ ಹಿನ್ನೆಲೆ, ಭೌಗೋಳಿಕ ಕಾರಣಗಳು, ಒಕ್ಕಲುತನ ಮೊದಲಾದ ವೃತ್ತಿ ಹಿನ್ನೆಲೆಗಳು, ಧಾರ್ಮಿಕ, ರಾಜಕೀಯ ಮೊದಲಾದ ಐತಿಹಾಸಿಕ ಕಾರಣಗಳೂ ಇವೆ. ಜನಪದ ಆಟಗಳು ಸಾಮಾಜಿಕ, ಮನೋವೈಜ್ಞಾನಿಕ, ಐತಿಹಾಸಿಕ ಮೊದಲಾದ ಕಾರಮಗಳಿಂದ ಮಹತ್ವವನ್ನು ಪಡೆದುಕೊಳ್ಳುತ್ತವೆ. ಇವುಗಳ ಅಧ್ಯಯನದಿಂದ ಸಮಾಜವನ್ನು ಪಡೆದುಕೊಳ್ಳುತ್ತವೆ. ಇವುಗಳ ಅಧ್ಯಯನದಿಂದ ಸಮಾಜವನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕೆಲವು ಆಟಗಳು ಎಲ್ಲೆಡೆ ಸ್ಥಳೀಯ ವ್ಯತ್ಯಾಸಗಳೊಂದಿಗೆ ಕಂಡುಬಂದರೆ. ಇನ್ನು ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಕಂಡುಬರುತ್ತವೆ. ಆಯಾ ಪ್ರದೇಶದ ಭಾಷೆ, ಸಂಸ್ಕೃತಿಯ ಗುಣಗಳನ್ನು ಪಡೆದುಕೊಂಡು ಬಳಕೆಯಲ್ಲಿವೆ. ಜನಪದ ಆಟಗಳ ಅಧ್ಯಯನ ಕರ್ನಾಟಕದ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.
©2024 Book Brahma Private Limited.