ಯಕ್ಷಗಾನದ ಹಾಡುಗಾರಿಕೆಯಲ್ಲಿರುವ ಛಂದಸ್ಸು ಮತ್ತು ಲಯದ ಕುರಿತಾಗಿ ಈ ಕಿರುಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಿಸಲಾಗಿದೆ. ಯಕ್ಷಗಾನ ಕಲೆ ಕುರಿತಾಗಿ ವಿವರಿಸುವ ಈ ಕೃತಿಯು ಈ ಕಲೆಯಲ್ಲಿ ನಾವು ತಿಳಿಯಬೇಕಾದ ಸೂಕ್ಷ್ಮ ವಿಷಯಗಳನ್ನು ವಿವರಿಸುತ್ತದೆ.
ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು. ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...
READ MORE