ಜಾನಪದ ಸಾಹಿತಿ ಡಾ ಶ್ರೀ ರಾಮ ಇಟ್ಟಣ್ಣವರ ʼಕೃತಿ-ಜಾನಪದ ಪರಿಕ್ರಮʼ ಜಾನಪದ ಬದುಕಿನ ಜೀವಂತಿಕೆಯನ್ನು ಹೊತ್ತ ಕೃತಿ ಇದು. ಜಾನಪದಕ್ಕೆ ಸಂಬಂಧಪಟ್ಟ ಒಂಬತ್ತು ಲೇಖನಗಳನ್ನು ಒಳಗೊಂಡಿದ್ದು, ಲೇಖನಗಳಲ್ಲಿ ಜಾನಪದ ಬದುಕಿನ, ವೈವಿಧ್ಯಮಯವಾದ ಭಾವ ಬಿಂದುಗಳಿವೆ. ಗ್ರಾಮೀಣ ಅನ್ವಯಿಕ ನೆಲೆಯಲ್ಲಿ ಒಡೆದು ತೋರುವ ಲೇಖಕರ ದೇಸಿ ಚಿಂತನ ಕ್ರಮಗಳು ಜಾನಪದ ಅಧ್ಯಯನ ವಲಯದಲ್ಲಿ ಹೊಸ ಸ್ಥಾನಮಾನವನ್ನು ಕಲ್ಪಿಸಿದೆ. ಅನುಭವ ದ್ರವ್ಯವನ್ನು ಅಧ್ಯಯನ ಮಾರ್ಗಕ್ಕೆ ಒಗ್ಗಿಸಿಕೊಳ್ಳುವ ಹದ ಲೇಖಕರಿಗೆ ದಕ್ಕಿರುವುದಿಲ್ಲಿ ಸ್ಪಷ್ಟವಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಒಂಭತ್ತು ಲೇಖನಗಳು ನಿರೂಪಣಾತ್ಮಕವಾಗಿವೆ. ಮತ್ತೆ ಕೆಲವು ಸಂಶೋಧನಾತ್ಮಕವಾಗಿವೆ.
©2025 Book Brahma Private Limited.