ಖ್ಯಾತ ಸಾಹಿತಿ ಡಾ. ಹಾ.ಮಾ. ನಾಯಕ ಅವರ ಕೃತಿ-ಜಾನಪದ ಸ್ವರೂಪ. ಜಾನಪದ ಸಾಹಿತ್ಯ ಬಹು ವಿಸ್ತಾರವಾದುದ್ದು. ಕಲೆಯೂ ಇದರಲ್ಲಿ ಒಳಗೊಳ್ಳುತ್ತದೆ. ಹೀಗೆ ಸಾಹಿತ್ಯ, ಕಲೆ, ಆಚಾರ-ವಿಚಾರ ಹೀಗೆ ಹತ್ತು ಹಲವು ಆಯಾಮಗಳಲ್ಲಿ ವಿಸ್ತರಿಸಿಕೊಂಡಿರುವ ಜಾನಪದ ಸಾಹಿತ್ಯವನ್ನು ಸೀಮಿತ ಪರಿಧಿಯಲ್ಲಿ ನೋಡಲಾಗದು. ಅದರ ಸ್ವರೂಪವೇ ಜಾಪನಪದ ಆಸಕ್ತರಿಗೆ ದಂಗು ಬಡಿಸುತ್ತದೆ. ಇಂತಹ ಸಂಗತಿಗಳನ್ನು ಆಧರಿಸಿ, ಜಾನಪದ ಎಂದರೇನು? ಜನಪದ ಎಂದರೇನು? ಜಾನಪದೀಯ ಪರಿಗಳು ಎಷ್ಟು ಮುಂತಾದ ಸಂಗತಿಗಳನ್ನು ಒಳಗೊಂಡ ಕೃತಿ ಇದು. ಜಾನಪದ ಸಾಹಿತ್ಯ ಆಸಕ್ತರಿಗೆ, ಸಂಶೋಧಕರಿಗೆ ಈ ಕೃತಿ ಉಪಯುಕ್ತ ಮಾಹಿತಿಯ ಕಣಜವಾಗಿದೆ.
©2024 Book Brahma Private Limited.