ಆಧುನಿಕ ಸಂದರ್ಭದಲ್ಲಿ ಜನಪದಕಲೆಗಳು ಒಂದು ರೀತಿಯ ಅವಕೃಪೆಗೆ ಗುರಿಯಾಗಿವೆ. ಜನಮನದಿಂದ ದೂರವಾಗುತ್ತಿರುವ ನಮ್ಮ ಸಂಸ್ಕೃತಿಯ ದ್ಯೋತಕವಾಗಿರುವ ಜನಪದ ಕಲೆಗಳನ್ನು, ಜಾನಪದ ಸಂಪತ್ತು ಇಂದು ಉಳಿಸಬೇಕಾಗಿದೆ, ಸಂರಕ್ಷಿಸಬೇಕಾಗಿದೆ. ಜೀವನದ ಭಾಗವಾಗಿ ಹುಟ್ಟಿಕೊಂಡಿರುವ ಜನಪದ ಹಾಡು, ಕುಣಿತ, ಕಲೆ, ಕತೆ ಮೊದಲಾದವುಗಳು ನಮ್ಮ ಹಿಂದಿನ ಸಂಪ್ರದಾಯದ ಸಂಕೇತಗಳಾಗಿವೆ. ಬದುಕಿನಲ್ಲಿ ಬದಲಾವಣೆಯಾಗಿರುವಂತೆ ಅವರ ಸಾಹಿತ್ಯದಲ್ಲಿ ಬದಲಾವಣೆಗಳಾಗಿವೆ. ಈ ಹಳೆಯ ಸಂಸ್ಕೃತಿ ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳ ಅಬ್ಬರದಲ್ಲಿ ಮಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಕೃತಿಯಲ್ಲಿದೆ.
©2024 Book Brahma Private Limited.