ಕಳೆದ ಶತಮಾನದ ಕೊನೆಯ ದಶಕದಲ್ಲಿ ಯಕ್ಷಗಾನವು ಕಂಡ ಪುನರ್ ಹೊಂದಾಣಿಕೆಯ ಸಂದರ್ಭದಲ್ಲಿ ಅಮೃತ ಸೋಮೇಶ್ವರರು ನಿರ್ವಹಿಸಿದ ಹೊಣೆಗಾರಿಕೆಯು ಅಪಾರವಾದುದು. ಯಕ್ಷಗಾನದ ರಂಗನಿರ್ಮಿತಿ, ಪರಂಪರೆಯ ಮುಂದುವರಿಕೆಯ ವಿನ್ಯಾಸ ಮತ್ತು ಮೌಲ್ಯಮಂಡನೆ ಈ ಮೂರೂ ಆಯಾಮಗಳಿಗೆ ಅಮೃತರು ನೀಡಿರುವ ಮಹತ್ವದ ಧೋರಣೆಗಳಿಗೆ ಯಕ್ಷತರು ಕೃತಿ ಸೊಗಸಾದ ನಿದರ್ಶನವಾಗಿದೆ. ಯಕ್ಷಗಾನದ ಇತಿಹಾಸ, ಸ್ವರೂಪ, ಪ್ರಸಂಗ ಸಾಹಿತ್ಯ ಪ್ರದರ್ಶನ, ಸಂವಾದಿ ರಂಗಕಲೆ ಹೀಗೆ ಯಕ್ಷಗಾನಕ್ಕೆ ಸಂಬಂಧಪಟ್ಟ 23 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಈ ಕೃತಿ, ಯಕ್ಷಗಾನದ ನಡೆ, ಕಳೆದ ಶತಮಾನದ ಯಕ್ಷಗಾನದ ಕುರಿತ ಬೀಸುನೋಟ, ಬಹು ಗುಣಗರ್ಭಿತ ಯಕ್ಷಗಾನ ಸಾಹಿತ್ಯ, ನಾಟ್ಯಶಾಸ್ತ್ರದ ನೆರಳಲ್ಲಿ ಬಯಲಾಟದ ಕುರಿತ ಜಿಜ್ಞಾಸೆ, ಯಕ್ಷಗಾನದ ಗತವೈಭವ, ಯಕ್ಷಗಾನದ ಆಹಾರ್ಯ ಭಾಗ, ವಿವಿಧ ಯಕ್ಷಗಾನ ಪ್ರಸಂಗಗಳ ಕುರಿತ ವಿವರಣೆ, ಯಕ್ಷಗಾನ ಲೇಖಕರ ಅವಲೋಕನ, ಭೂತಾರಾಧನೆ ಮತ್ತು ಯಕ್ಷಗಾನದ ನಡುವಿನ ತುಲನೆ, ಜನಮಾನಸದಲ್ಲಿ ಉಳಿದಿರುವ ಯಕ್ಷಗಾನ ಕಲಾವಿದರ ಪರಿಚಯ, ಮಕ್ಕಳು ಮತ್ತು ಮಹಿಳೆಯರ ಯಕ್ಷಗಾನಗಳ ಅವಲೋಕನ, ಶಾಸ್ತ್ರೀಯತೆ ಮತ್ತು ದೇಸೀಯತೆಯ ನಡುವೆ ಯಕ್ಷಗಾನದ ಸ್ಥಿತಿ ಲಯಗಳ ವಿಶ್ಲೇಷಣೆಗಳನ್ನು ಇಲ್ಲಿರುವ ಲೇಖನಗಳಲ್ಲಿ ಕಾಣಬಹುದು.
©2024 Book Brahma Private Limited.